POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಮೂರು ಕಾರುಗಳ ನಡುವೆ ಅಪಘಾತ : ಮಹಿಳೆ ಸಾವು

Screenshot 20241219 194640 Chrome.jpg

ಮೂರು ಕಾರುಗಳ ನಡುವೆ ಅಪಘಾತ : ಮಹಿಳೆ ಸಾವು

ಶಿವಮೊಗ್ಗ : ತಾಲೂಕಿನ ಬೇಡರ ಹೊಸಹಳ್ಳಿ ಸಮೀಪ ಮೂರು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಮೂರು ಕಾರುಗಳಲ್ಲಿದ್ದ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.ಕೊಪ್ಪಳಕ್ಕೆ ತೆರಳುತ್ತಿದ್ದ ಕಿಯಾ ಸೆಲ್ಲೋಸ್ ಕಾರಿಗೆ ಎದುರಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ.

ಇದೇ ವೇಳೆ ಹಿಂದಿನಿಂದ ಬಂದ ಸ್ವಿಫ್ಟ್ ಕಾರು ಕಿಯಾ ಸೆಲ್ಲೋಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಿಯಾ ಕಾರಿನಲ್ಲಿದ್ದ  ಸುಲೋಚನಾ (60) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.