ಜೀರೋ ಟ್ರಾಫಿಕ್ ನಲ್ಲಿ ಮಣಿಪಾಲ ಆಸ್ಪತ್ರೆಗೆ 6 ದಿನದ ಮಗು ರವಾನೆ
ಶಿವಮೊಗ್ಗ : ತುರ್ತು ಚಿಕಿತ್ಸೆ ಆಗತ್ಯವಿದ್ದ ಹಿನ್ನಲೆಯಲ್ಲಿ ಮಗುವೊಂದನ್ನು ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಿವಾರ ರವಾನೆ ಮಾಡಲಾಗಿದೆ.
ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ಸಾಗರ ಮೂಲದ ಸುಮಂಗಳ ಹಾಗೂ ಲೋಕೆಶ್ ದಂಪತಿಗಳ 6 ದಿನದ ಗಂಡು ಮಗುವಿಗೆ ಐದು ದಿನದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಣಿಪಾಲಕ್ಕೆ ತರಲಾಗುತ್ತಿದೆ. ವೈದ್ಯರು, ಅಧಿಕಾರಿಗಳು ಮತ್ತು ಪೊಲೀಸರು ಮಗುವನ್ನು ರವಾನಿಸಲು ನೆರವಾಗಿದ್ದಾರೆ.