ಅಭಿವೃದ್ಧಿ ಸಹಿಸದೇ ಬಿಜೆಪಿ ಪಕ್ಷದಿಂದ ಜನರ ದಿಕ್ಕು ತಪ್ಪಿಸಲು ಪ್ರತಿಭಟನೆ – ಬಿ ಪಿ ರಾಮಚಂದ್ರ
ರಿಪ್ಪನ್‌ಪೇಟೆ : ಪಟ್ಟಣದ ಅಭಿವೃದ್ಧಿಯನ್ನು ಸಹಿಸದೇ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಆಧಾರ ರಹಿತವಾದ ಆರೋಪವನ್ನು ಮಾಡಿ ರಾಜಕೀಯ ಪ್ರೇರಿತವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾದರೆ ಅವರ ವಿರುದ್ದ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧನಲಕ್ಷಿ ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾದ ನಂತರ ಮಹಿಳೆಯಾಗಿದ್ದರೂ ಭ್ರಷ್ಟಾಚಾರ ರಹಿತವಾದ ಸಮರ್ಥ ಆಡಳಿತವನ್ನು ನೀಡುತ್ತಿದ್ದು ಇದನ್ನು ಸಹಿಸದ ಬಿಜೆಪಿ ಪಕ್ಷದವರು ಅವರ ಮೇಲೆ ಆಧಾರರಹಿತ ಆರೋಪ ಹೊರಿಸಿ ಅವರ ರಾಜೀನಾಮೆಗೆ ಒತ್ತಾಯಿಸುತಿದ್ದಾರೆ.ಹುರುಳಿಲ್ಲದ ಆರೋಪಗಳಿಂದ ರಾಜಿನಾಮೆ ನೀಡಬೇಕಾದ ಅಗತ್ಯವಿಲ್ಲ. ಮತ್ತೆ ಮತ್ತೆ ಅನಾವಶ್ಯಕವಾಗಿ ಸಾರ್ವಜನಿಕರನ್ನು ದಾರಿತಪ್ಪಿಸುವ ವ್ಯವಸ್ಥೆಗೆ ಮುಂದಾದರೆ ಬಿಜೆಪಿ ನಾಯಕರುಗಳ ಬಾರ್ ಮಾಲೀಕರ ಬಳಿ ಲಂಚ ಪಡೆದ ಆಡಿಯೋ ಹಾಗೂ ಅವರದೇ ಪಕ್ಷದ ಮಹಿಳಾ ಕಾರ್ಯಕರ್ತೆಯ ಬಗ್ಗೆ ಕೀಳು ಅಭಿರುಚಿಯಲ್ಲಿ ಮಾತನಾಡಿರುವ ದಾಖಲಾತಿಗಳು ನಮ್ಮ ಬಳಿಯೂ ಇದ್ದು ನಾವು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ ನಿಮ್ಮ ಸಾಚತನವನ್ನು ಜಗಜ್ಜಾಹಿರುಗೊಳಿಸಬೇಕಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ಮಾತನಾಡಿ ಗ್ರಾಪಂ ಅಧ್ಯಕ್ಷೆ ಮತ್ತು ಗ್ರಾ.ಪಂ.ಸದಸ್ಯ ರಿಪ್ಪನ್‌ಪೇಟೆ ಘಟಕದ ಅಧ್ಯಕ್ಷ ಗಣಪತಿ ರವರ ಮೇಲೆ ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡ ಬಿಜೆಪಿ ಮುಖಂಡರು ಸುಳ್ಳು ಅಪಾದನೆಗಳನ್ನು ಮಾಡುತ್ತ ರಾಜಕೀಯ ಮಾಡುತ್ತಿದ್ದಾರೆ.ಅತ್ಯುತ್ತಮವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಗ್ರಾಪಂ ಅಧ್ಯಕ್ಷರು ಹಾಗೂ ಕಾಂಗ್ರೇಸ್ ಪಕ್ಷದ ಏಳಿಗೆಯನ್ನು ಸಹಿಸದೆ ತಮ್ಮ ತಪ್ಪುಗಳನ್ನು ಮರೆಮಾಚುವ ಉದ್ದೇಶದ ಕುತಂತ್ರ ನಡೆಸುತ್ತಿದ್ದಾರೆ. ಆಧಾರವಿಲ್ಲದ ಎಡಿಟ್ ಆಡಿಯೋ ಇಟ್ಟುಕೊಂಡು ಅಧ್ಯಕ್ಷರ ರಾಜೀನಾಮೆ ಕೇಳುತಿದ್ದು ಈಗಿನ ತಾಂತ್ರಿಕ ಯುಗದಲ್ಲಿ ಯಾರಧ್ವನಿಯನ್ನು ಯಾರು ಬೇಕಾದರೂ ಅಣುಕುಮಾಡಬಹುದು ಇಂತಹ ಆಧಾರ ವಿಲ್ಲದ ಸುಳ್ಳು ಆರೋಪಗಳಿಗೆ ನಿಮಗೆ ಉತ್ತರ ನೀಡಲು ಕಾಂಗ್ರೆಸ್ ಪಕ್ಷ ತಯಾರಿದೆ, ಅಂಜುವ ಪ್ರಶ್ನೆಯೇ ಇಲ್ಲಾ. ನಿಮ್ಮ ವರ್ತನೆ ಹೀಗೆಯೇ ಮುಂದುವರೆದರೆ ಬಿಜೆಪಿ ಪಕ್ಷದ ಮುಖಂಡರ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ಼್ ಹಾಗೂ ಕೆಡಿಪಿ ಸದಸ್ಯರಾದ ಚಂದ್ರೇಶ್ ಎನ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ ಪರಮೇಶ್, ಕೆಡಿಪಿ ಸದಸ್ಯ ಆಸೀಫ್ ಭಾಷಾ, ಗ್ರಾಪಂ ಸದಸ್ಯರಾದ ಮಧುಸೂಧನ್, ಪ್ರಕಾಶ್ ಪಾಲೇಕರ್, ಗಣಪತಿ, ನಿರುಪಮರಾಕೇಶ್, ಫ್ಯಾನ್ಸಿ ರಮೇಶ್, ಶ್ರೀಧರ ಚಿಗುರು ,ವಿಜಯ್ ಮಳವಳ್ಳಿ ಇನ್ನಿತರರಿದ್ದರು.