ನುಚ್ಚು ನೂರಾಯ್ತು ಅಭಿಮಾನಿಗಳ ಕನಸು – ಸಿಗಲಿಲ್ಲ ದರ್ಶನ್ ಗೆ ಜಾಮೀನು | ದಾಸನಿಗೆ ಜೈಲೇ ಗತಿ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿ 115 ದಿನಗಳೇ ಕಳೆದಿದೆ,ಈ ಕೇಸ್ನಲ್ಲಿ ಎ2 ಆರೋಪಿ ಆಗಿರುವ ದಾಸ ಬೇಲ್ ಪಡೆದು ಹೊರಬರುವ ದಿನಕ್ಕಾಗಿ ಅಭಿಮಾನಿಗಳು ಕಾಯ್ತಾ ಇದ್ರು, ಆದ್ರೆ ಮತ್ತೆ ದರ್ಶನ್ ಜಾಮೀನು ಕನಸು ನುಚ್ಚು ನೂರಾಗಿದೆ.
ಕಳೆದ ವಾರ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ಪೂರ್ಣಗೊಳಿಸಿತ್ತು. ಇಂದು ಬೇಲ್ ಅದೇಶ ಹೊರಬಿದ್ದಿದ್ದು, ದರ್ಶನ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಸದ್ಯ ದರ್ಶನ್ಗೆ ಜೈಲೇ ಗತಿ ಆಗಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಇದೀಗ ಶಾಕ್ ಎದುರಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಮೊದಲ ಆರೋಪಿಯಾಗಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ಕೋರ್ಟ್ ಶಾಕ್ ಕೊಟ್ಟಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್, ಜಾಮೀನು ನಿರಾಕರಿಸಿ ಆದೇಶ ನೀಡಿದೆ.