FACT CHECK | ಗೋವಾದಲ್ಲಿ ದೋಣಿ ಪಲ್ಟಿಯಾಗಿ 50 ಜನ ಸಾವನ್ನಪ್ಪಿದ್ದಾರೆ ಎಂಬ ವೈರಲ್ ವೀಡಿಯೋ.!? ಏನಿದರ ಅಸಲಿಯತ್ತು.!?
ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಗೋವಾದಲ್ಲಿ ನಡೆದಿರುವ ಘಟನೆಯ ವಿಡಿಯೋ ಎಂದು ಸುದ್ದಿ ವ್ಯಾಪಿಸಿತ್ತು.
ಗೋವಾದಲ್ಲಿ ಓವರ್‌ಲೋಡ್ ಮಾಡಿದ ಸ್ಟೀಮರ್ ಬೋಟ್ ಅಪಘಾತಕ್ಕೀಡಾಗಿದ್ದು, 64 ಜನರು ನಾಪತ್ತೆಯಾಗಿದ್ದಾರೆ ಮತ್ತು 23 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿತ್ತು.
ಈಸ್ಟ್ ಕಾಂಗೋದ ಕಿವು ಸರೋವರದಲ್ಲಿ ಹಲವಾರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಬಂದರಿನ ಸಮೀಪ ಇದ್ದಕ್ಕಿದ್ದಂತೆ ಮಗುಚಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಯ ವಿಡಿಯೋ ಇದಾಗಿದೆ.
ನೂರಾರು ಪ್ರಯಾಣಿಕರಿಂದ ತುಂಬಿದ್ದ ಈ ದೋಣಿ ಬಂದರಿನ ಸಮೀಪ ನಿಲ್ಲಲು ಪ್ರಯತ್ನಿಸುತ್ತಿದ್ದಾಗ ಧಿಡೀರ್ ಮುಳುಗಿದೆ.
ಎಕ್ಸ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ನೀರಿನಲ್ಲಿ ದೋಣಿ ಮುಳುಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಇದು ಪೂರ್ವ ಕಾಂಗೊದಲ್ಲಿ ನಡೆದಿರುವ ಘಟನೆಯ ವಿಡಿಯೋವಾಗಿದೆ.
ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಗೋವಾದಲ್ಲಿ ಈ ದುರ್ಘಟನೆ ನಡೆದಿದೆ ಎಂದು ವದಂತಿ ಹಬ್ಬಿಸಲಾಗಿದ್ದು ಇದು ಸುಳ್ಳು ಸುದ್ದಿಯಾಗಿದೆ.