POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು – 14 ಬೈಕ್ ಸಮೇತ ಆರು ಜನ ಆರೋಪಿಗಳ ಬಂಧನ

GridArt 20241008 194923953.jpg

ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಬಂಕಾಪುರ : ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬಂಕಾಪುರ ಪೊಲೀಸ್ ಠಾಣೆ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಬಂಧಿಸಿ ಹೆಡೆಮುರಿ ಕಟ್ಟಿ 14 ಬೈಕ್‌ ಸಮೇತ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಕಾಪೂರ, ಶಿಗ್ಗಾಂವ, ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದ್ವಿ ಚಕ್ರ, ವಾಹನಗಳು ಕಳ್ಳತನ ಪ್ರಕರಣಗಳು ನಡೆಯುತಿದ್ದ ಹಿನ್ನಲೆ ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಬಂಕಾಪುರ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ 5.50 ಲಕ್ಷ ಮೌಲ್ಯದ 14 ಬೈಕ್ ಹಾಗೂ 20 ಸಾವಿರ ರೂ ಮೌಲ್ಯದ ಆಯಿಲ್ ಪಂಪ್ ಗಳನ್ನು ವಶಕ್ಕೆ ಪಡೆದು ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತರಾದ ವಿನಾಯಕ , ಕರಬಸಪ್ಪ , ಮಧು , ಆನಂದಗೌಡ ,ಕುಮಾರಗೌಡ, ವಿಜಯಕುಮಾರ ರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಹನಮಂತಪ್ಪ, ಚಂದ್ರಕಾಂತ ರವರು ಪರಾರಿಯಾಗಿದ್ದಾರೆ.

ಆರೋಪಿತರಿಗೆ ದಸ್ತಗೀರ ಮಾಡಿ ಕಳ್ಳತನ ಮಾಡಿದ ದ್ವಿ ಚಕ್ರ ವಾಹನಗಳನ್ನು ಮತ್ತು ಆಯಿಲ್ ಮಷೀನ್ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು. ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಆರೋಪಿತರನ್ನು ಪತ್ತೆ ಮಾಡಿದ ನಿಂಗಪ್ಪ ಕರಕಣ್ಣನವರ ಪಿಎಸ್‌ಐ ಬಂಕಾಪೂರ ಪೊಲೀಸ್ ಠಾಣೆ ಹಾಗೂ ಪತ್ತೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗಳಾದ ಎಸ್ ಎಮ್ ವನಹಳ್ಳಿ ಪಿಎಸ್‌ಐ 2 , ಬಿ ಎನ್ ಅಗಸಿಮನಿ ಎ.ಎಸ್.ಐ. ಕೆ ರಜನಿ ಮಎಎಸ್‌ಐ, ಎ ಕೆ ನದಾಪ, ಗೊವಿಂದ ಲಮಾಣಿ, ಪ್ರವೀಣ ಕೋಟಿಹಾಳ, ಜಬೀವುಲ್ಲಾ ದೊಡ್ಡಮನಿ, ಕರಬಸಪ್ಪ ಹಾವಣಗಿ, ಬೀರಪ್ಪ ಕಳ್ಳಿಮನಿ, ಶಂಕರ ಗೊಂದಳಿ, ನಿಂಗಪ್ಪ ಪೂಜಾರ,ವಾಸು ಹೆಗಡೆ, ಷಣ್ಮುಖ ಲಮಾಣಿ, ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಸತೀಶ ಮಾರಕಟ್ಟೆ ಮಾರುತಿ ಹಾಲಬಾವಿ ನೇದವರಿಗೆ ಇದ್ದರು.

ಹಾವೇರಿಯ ಪೊಲೀಸ್ ಅಧೀಕ್ಷಕರಾದ ಅಂಶುಕುಮಾರ್ ಈ ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.