
ಕೆಲಸಕ್ಕೆಂದು ಹೋಗಿದ್ದ ಯುವತಿ ನಾಪತ್ತೆ – ಚಾನಲ್ ನಲ್ಲಿ ಮೃತದೇಹ ಪತ್ತೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವರಾಮನಗರದ ವಾಸಿಯೊಬ್ಬರ ಮಗಳು 17 ವರ್ಷದ ಯುವತಿ ಸೆ.19 ರಂದು ಪ್ಯಾಕ್ಟರಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು,ಇದೀಗ ಆಕೆಯ ಮೃತದೇಹ ಬಿದರೆ ಬಳಿಯ ಭದ್ರಾ ಚಾನಲ್‌ನಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳು ಪ್ಯಾಕ್ಟರಿ ಕೆಲಸಕ್ಕೆ ಎಂದು ಹೋದವರು ನಾಪತ್ತೆಯಾಗಿದ್ದರು. ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಆಕೆಯ ಬ್ಯಾಗ್, ಚಪ್ಪಲಿ ಮತ್ತು ಐ.ಡಿ.ಕಾರ್ಡ್ ಸಿಕ್ಕಿರುತ್ತದೆ.ಯುವತಿಯ ಪತ್ತೆಗಾಗಿ ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಕಟಣೆ ನೀಡಿದ್ದರು.
ಈ ಸಂಬಂಧ ವಾರ್ತಾ ಇಲಾಖೆಯ ಮೂಲಕ ರೈಲ್ವೆ ಪೊಲೀಸ್ ಇಲಾಖೆ ಪ್ರಕಟಣೆಯನ್ನ ಸಹ ನೀಡಿತ್ತು. ಪ್ರಕಟಣೆ ಹೊರಬಿದ್ದ ಬೆನ್ನಲ್ಲೆ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
