ಇಸ್ಪೀಟು ಅಡ್ಡೆ ಪೊಲೀಸರ ದಾಳಿ – ನಗದು ಸಹಿತ ಹನ್ನೊಂದು ಮಂದಿ ವಶಕ್ಕೆ.!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಹಳೆಬಾಣೆಗ ಗ್ರಾಮದಲ್ಲಿ ಇಸ್ಪೀಡ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ನಗದು ಹಾಗೂ ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಹಳೆ ಬಾಣಿಗ ರಸ್ತೆಯ ಪೊದೆಯೊಂದರ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ದೊರೆತ ಹೊಸನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡಿದ್ದ ಇಸ್ಪೀಟ್ ಎಲೆಗಳನ್ನು ಹಾಗೂ 17,640 ರೂ. ನಗದನ್ನು ವಶಕ್ಕೆ ಪಡೆದು ಇಸ್ಪೀಟ್ ಆಟದಲ್ಲಿ ತೊಡಗಿದ್ದ 11 ಜನರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ದಾಳಿಯಲ್ಲಿ ಹೊಸನಗರ ಪಿಎಸ್ಐ ಎಸ್ ಜಿ ಪಾಟೀಲ್, ಈರೇಶ್, ಮಾಯಪ್ಪ, ರಂಜಿತ್ ಸುನಿಲ್, ಮಹೇಶ್, ಗಂಗಪ್ಪ ಬಟೋಲಿ ಇದ್ದರು.