Headlines

ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ  ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ

ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ  ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ

ರಿಪ್ಪನ್‌ಪೇಟೆ : ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಬಂಡೆಕಲ್ಲಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ಜರುಗಿತು.

ಇಂದು ಮುಂಜಾನೆಯಿಂದಲೇ ಭಾರಿ ಮಳೆಯ ಮಧ್ಯ  ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧಡೆಗಳಿಂದ ಭಕ್ತರು ಜಮಾವಣೆಗೊಂಡು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಮಳೆಯಲ್ಲಿಯೇ ನಿಂತುಕೊಂಡದ್ದು ವಿಶೇಷವಾಗಿತು.

ಬೇಡಿ ಬಂದ ಭಕ್ತರ ಆಶೋತ್ತರಗಳನ್ನು ಈಡೇರಿಸುವ ತಾಯಿ ಜೇನುಕಲ್ಲಮ್ಮ ತಾಯಿಗೆ ಮದುವೆಯಾಗದವರು ಸಂತಾನ ಭಾಗ್ಯ ಹೀಗೆ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವಂತೆ ತಾಯಿಯಲ್ಲಿ ಹರಿಕೆ ಹಣ್ಣು ಕಾಯಿ ಸಮರ್ಪಿಸುತ್ತಾ ಮಹಿಳೆಯರು ಮತ್ತು ಯುವತಿಯರು ದೇವಿಯ ಬಳಿ ಪ್ರಾರ್ಥಿಸುತ್ತಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸಿ,ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಬಿ.ಸ್ವಾಮಿರಾವ್, ಧರ್ಮದರ್ಶಿಗಳಾದ ಕೆ.ಎಲ್.ಸುದೀರ್, ಸಂತೋಷ,ಹೆಚ್.ಕೆ.ಹರೀಶ್‌ಕಲ್ಯಾಣಪ್ಪಗೌಡ,ಪುಟ್ಟಪ್ಪ, ಶ್ರೀನಿವಾಸ ಹಿಂಡ್ಲೆಮನೆ,ರತ್ನಮ್ಮ ಕುನ್ನೂರು,ಸರೋಜ ದೇವರಾಜ್,ಕೋಡೂರು ಗ್ರಾಮ ಪಂಚಾಯ್ತಿ ಸದಸ್ಯ ಜೈಪ್ರಕಾಶ್,ಕೋಡೂರು ವಿಜೇಂದ್ರಭಟ್, ಬೆಳ್ಳೂರು ಡಾಕಪ್ಪ, ಹರತಾಳು ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನಮ್ಮ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *