Ripponpete | ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ
ರಿಪ್ಪನ್‌ಪೇಟೆ : ಬರುವೆ ಗ್ರಾಮದ ಮಂಜುನಾಥ್ ಎಂಬುವವರ ಮನೆಯ ಸಮೀಪದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಆಗುಂಬೆ ಮಳೆಕಾಡು ಸಂರಕ್ಷಣಾ ಕೇಂದ್ರದ ಉರಗ ಸಂಶೋಧಕ ಅಜಯ್ ಗಿರಿ ಮತ್ತು ತಂಡದವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಬರುವೆ ಗ್ರಾಮದ ಮಂಜುನಾಥ್ ಮನೆಯ ಸಮೀಪದಲ್ಲಿದ್ದ ಕಾಳಿಂಗ ಸರ್ಪವನ್ನು ಕಂಡು ಸ್ಥಳೀಯರು ಉಪ ವಲಯ ಅರಣ್ಯಾಧಿಕಾರಿ ಮಹೇಶ್ ನಾಯ್ಕ್ ರವರಿಗೆ ಮಾಹಿತಿ ತಿಳಿಸಿದ್ದಾರೆ.
ವಿಷಯ ತಿಳಿಯುತಿದ್ದಂತೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಮಹೇಶ್ ನಾಯ್ಕ್ ತಕ್ಷಣ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಂತರದಲ್ಲಿ ತಮ್ಮ ತಂಡದೊಂದಿಗೆ ಸ್ಥಳಕ್ಕಾಗಮಿಸಿದ ಅಜಯ್ ಗಿರಿ ರವರು ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿ ಬಿಟ್ಟಿದ್ದಾರೆ.
ಸುಮಾರು ಹನ್ನೆರೆಡೂವರೆ ಅಡಿ ಉದ್ದವಿದ್ದ ಕಾಳಿಂಗ ಸರ್ಪ 6 ಕೆ ಜಿ 650 ಗ್ರಾಂ ನಷ್ಟು ತೂಕವಿತ್ತು.
ಬರುವೆ ಗ್ರಾಮದಲ್ಲಿ ಹಲವಾರು ದಿನಗಳಿಂದ ಓಡಾಡುತಿದ್ದ ಬೃಹತ್ ಕಾಳಿಂಗ ಸರ್ಪ ದಿಂದ ಹೆದರಿಕೊಂಡು ಓಡಾಡುತಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಅನಿಲ್ , ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದವರು ಇದ್ದರು.