ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಹೂವಮ್ಮ ರಾಮಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿದ್ದ ರಮ್ಯ ಶಶಿಕುಮಾರ್ ರಾಜೀನಾಮೆ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣಾಧಿಕಾರಿ ಶಿವಪ್ರಸಾದ್ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.
ಸ್ಥಾನಕ್ಕೆ ಹೂವಮ್ಮ ರಾಮಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ , ಗ್ರಾಪಂ ಸದಸ್ಯರಾದ ಮಹಮ್ಮದ್ ಷರೀಫ್ , ಕೃಷ್ಣೋಜಿರಾವ್ , ಪುಟ್ಟಮ್ಮ , ರಮ್ಯ ಪಿಡಿಓ ರವಿಕುಮಾರ್ , ಕಾರ್ಯದರ್ಶಿ ದುರ್ಗಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಂಜುನಾಥ್ ಮಾದಾಪುರ ಚಂದ್ರಪ್ಪ , ವಿಜಯ್ ಕೆ ಎಲ್ , ಗೋಪಾಲ್ ದಾಸ್ , ಬೈರಪ್ಪ , ಷಣ್ಮುಖಪ್ಪ ಕೆದಲುಗುಡ್ಡೆ , ಖಲೀಲ್ ಷರೀಫ್ ಹಾಗೂ ಇನ್ನಿತರರಿದ್ದರು.