w
Headlines
Home » ಶಾಸಕ ಬೇಳೂರು ಗೋಪಾಲಕೃಷ್ಣ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ -ಜಿಲ್ಲಾ ಕಾಂಗ್ರೆಸ್ ಮುಖಂಡ ನಾಗರಾಜ್ ಕಡೇಕಲ್ | Hosanagara

ಶಾಸಕ ಬೇಳೂರು ಗೋಪಾಲಕೃಷ್ಣ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ -ಜಿಲ್ಲಾ ಕಾಂಗ್ರೆಸ್ ಮುಖಂಡ ನಾಗರಾಜ್ ಕಡೇಕಲ್ | Hosanagara

ಶಾಸಕ ಬೇಳೂರು ಗೋಪಾಲಕೃಷ್ಣ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ -ಜಿಲ್ಲಾ ಕಾಂಗ್ರೆಸ್ ಮುಖಂಡ ನಾಗರಾಜ್ ಕಡೇಕಲ್


ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ರವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮುನ್ನ ಬಿಜೆಪಿ ಪಕ್ಷದ ಮುಖಂಡರು ಎಚ್ಚರಿಕೆಯಿಂದರಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ನಾಗರಾಜ್ ಕಡೇಕಲ್ ಹೇಳಿದರು.


ಹೊಸನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಸಾಗರದ ಶಾಸಕರು ಮೋಜು-ಮಸ್ತಿಗೆ ವಿದೇಶಕ್ಕೆ ಹೋಗುತ್ತಾರೆಂದು ಸುಖಾಸುಮ್ಮನೆ ಆರೋಪಿಸುವ ಬಿಜೆಪಿಯವರು ತುಚ್ಚ ಹೇಳಿಕೆ ನೀಡಿ ತಮ್ಮದೇ ಗೌರವ ಕಳೆದುಕೊಳ್ಳಬಾರದು, ಶಾಸಕರು ವಿದೇಶಕ್ಕೆ ಹೋಗಿರುವುದು ತಮ್ಮ ಕೌಟುಂಬಿಕ ಕಾರಣಗಳಿಗಾಗಿಯೇ ಹೊರತು ಮೋಜು ಮಸ್ತಿಗಲ್ಲ ಎಂದರು.

ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು , ಕಾಂಗ್ರೇಸ್ ಪಕ್ಷದ ಪ್ರಮಖ ಕಾರ್ಯಕರ್ತರಿಗೆ ಮತ್ತು ತಾಲ್ಲೂಕು ಕಚೇರಿ ಆಡಳಿತಾಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿ ಇಓ ಮತ್ತು ಸಾಗರ ನಗರಸಭೆಯ ಕಮೀಷನರ್’ರವರಿಗೆ ಮಳೆಹಾನಿಯ ಬಗ್ಗೆ ಸಂಪೂರ್ಣ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ, ಅದರಂತೆ ಪಕ್ಷದ ಕಾರ್ಯಕರ್ತರು ಸಹ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಜನತೆಗೆ ಸಾಂತ್ವನ ಹೇಳಿ ಶಾಸಕರು ಹೇಳಿದಂತೆ ವೈಯಕ್ತಿಕವಾಗಿ  ಧನಸಹಾಯ ಮಾಡಲಾಗುತ್ತಿದೆ.

ಈ ತರಹದ ಹಗುರವಾದ ಹೇಳಿಕೆಗಳನ್ನು ಬಿಜೆಪಿ ನೀಡುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಾದ್ಯಂತ ಹೋರಾಟ ಹಮ್ಮಿಕೊಳ್ಲಾಬೇಕಾಗುತ್ತದೆ ಎಂದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.