ಪತ್ರಿಕಾ ದಿನಾಚರಣೆ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ವಾಹನ ಚಾಲನೆ ಕಲಿಕಾ ಪರವಾನಗಿ ನೋಂದಣಿ ಶಿಬಿರ (LLR)
ರಿಪ್ಪನ್‌ಪೇಟೆ : ಪತ್ರಿಕಾ ದಿನಾಚರಣೆ ಅಂಗವಾಗಿ ರಿಪ್ಪನ್‌ಪೇಟೆ ಪತ್ರಕರ್ತರ ಬಳಗ , ಪೊಲೀಸ್ ಇಲಾಖೆ ,ಪ್ರಾದೇಶಿಕ ಸಾರಿಗೆ ಇಲಾಖೆ ಸಾಗರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಜುಲೈ 06 ರ ಶನಿವಾರ ವಾಹನ ಪೂರ್ವ ಚಾಲನ ಪರವಾನಗಿ(LLR) ಶಿಬಿರವನ್ನು ಆಯೋಜಿಸಲಾಗಿದೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ವಾಹನ ಪೂರ್ವ ಚಾಲನ ಪರವಾನಗಿ ಶಿಬಿರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ ನೀಡಲಿದ್ದು , ಮುಖ್ಯ ಅತಿಥಿಗಳಾಗಿ ವೀರೇಶ್ ARTO ಸಾಗರ,ಪ್ರವೀಣ್ ಎಸ್ ಪಿ ಪಿಎಸ್‌ಐ, ವಾಸುದೇವ್ ಡಿ ಎನ್ ಹಿರಿಯ ಮೋಟಾರ್ ವಾಹನ ನಿರೀಕ್ಷಕರು , ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ , ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಲಿದ್ದಾರೆ.
ಪತ್ರಿಕಾ ದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರ್ವ ಚಾಲನಾ ಪರವಾನಗಿ ಶಿಬಿರವನ್ನು ಆಯೋಜಿಸಲಾಗಿದೆ.
ರಿಪ್ಪನ್‌ಪೇಟೆ ಭಾಗದಲ್ಲಿ ನಡೆಯುತ್ತಿರುವ ಸದಾವಕಾಶವನ್ನು ಬಳಸಿಕೊಂಡು ನೊಂದಣ  ಮಾಡಿಸುವ ವಿದ್ಯಾರ್ಥಿಗಳು ಭಾವಚಿತ್ರ, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಹಾಗೂ ನೊಂದಣ  ಶುಲ್ಕ 200 ರೂಪಾಯಿಗಳೊಂದಿಗೆ ಹಾಜರಾಗಿ ನೊಂದಾಯಿಸಿಕೊಳ್ಳಲು ಕೋರಿದೆ. 
ಹೆಚ್ಚಿನ ಮಾಹಿತಿಗಾಗಿ : ಪಿಎಸ್‌ಐ ರಿಪ್ಪನ್‌ಪೇಟೆ 9480803365  , ರಫ಼ಿ ರಿಪ್ಪನ್‌ಪೇಟೆ 9845845844 , ಚಿದಾನಂದ ಸ್ವಾಮಿ 9449497734 ಇವರುಗಳನ್ನು ಸಂಪರ್ಕಿಸಬಹುದಾಗಿದೆ.
 
                         
                         
                         
                         
                         
                         
                         
                         
                         
                        