ಕಾಲು ಸಂಕ ದಾಟುತಿದ್ದಾಗ ಮಹಿಳೆ ಕಾಲು ಜಾರಿ ಬಿದ್ದು ಸಾವು | Crime News
ಹೊಸನಗರ: ತಾಲೂಕಿನಾದ್ಯಂತ ಕಳೆದ ಮೂರು ದಿನದಿಂದ ಬಾರೀ ಮಳೆಯಾಗುತ್ತಿದ್ದು, ಮಹಿಳೆಯೋರ್ವಳು ಜಮೀನಿನ ಸಂಕ ದಾಟಲು ಹೋದಾಗ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆಯಾಗಿದ್ದಾಳೆ.
ಮೃತ ಮಹಿಳೆ ಶಶಿಕಲಾ ಬೆಳಿಗ್ಗೆ ಅಗೆ ಹಾಕಲು ನೋಡಿಕೊಂಡು ಬರಲು ಜಮೀನಿಗೆ ಹೋಗಿದ್ದು ವಾಪಾಸು ಬಂದಿರಲಿಲ್ಲ. ಕೆಲಹೊತ್ತು ಬಿಟ್ಟು ಮನೆಯವರು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿಮೀ ದೂರದ ದುಮುಕದ ಗದ್ಧೆ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿಹಾಕಿರುವುದು ಕಂಡು ಬಂದಿದೆ.
ಪರಿಶೀಲಿಸಿದಾಗ ಮೃತ ಶಶಿಕಲಾರ ಮೃತದೇಹ ಎಂದು ಗೊತ್ತಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ