w
Headlines
Home » ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಕಠಿಣ ಶಿಕ್ಷೆ | Pocso

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಕಠಿಣ ಶಿಕ್ಷೆ | Pocso

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಕಠಿಣ ಶಿಕ್ಷೆ | Pocso

ಅಪ್ರಾಪ್ತೆಯ ಖಾಸಗಿ ಪೋಟೋವನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿದ್ದ ವ್ಯಕ್ತಿಗೆ ಕೋರ್ಟ್‌ ಐದು ವರ್ಷ ಶಿಕ್ಷೆ ನೀಡಿದೆ. 

ನ್ಯಾಯಾಧೀಶರಾದ  ಮೋಹನ್ ಜೆ ಎಸ್ ರವರು ದಿನಾಂಕಃ 26-06-2024  ರಂದು ಪ್ರಕರಣದ ಆರೋಪಿ 30 ವರ್ಷದ ಯುವಕನಿಗೆ 5 ವರ್ಷ ಕಠಿಣ ಕಾರಾವಾಸ ಶಿಕ್ಷೆ, ರೂ 2,50,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 1 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ನೊಂದ ಬಾಲಕಿಗೆ ಪರಿಹಾರವಾಗಿ ದಂಡದ ಮೊತ್ತದಲ್ಲಿ 2,40,000/-  ನೀಡುವಂತೆ ಆದೇಶಿಸಿದ್ದಾರೆ.

ಘಟನೆಯ ಹಿನ್ನಲೆ :

2021ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಥಳವೊಂದರ ನಿವಾಸಿ 30 ವರ್ಷದ ಯುವಕನ 17  ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಖಾಸಗೀ ಚಿತ್ರಗಳನ್ನು ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು. ಆ ಬಳಿಕ ಆಕೆಯ  ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಮಾನ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂದ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ಕಲಂ 354 (A), 354 (D), 376 (2) (n), 509 ಐಪಿಸಿ ಮತ್ತು ಪೋಕ್ಸೋ ಹಾಗೂ ಐಟಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. 

ಅಂದಿನ ಠಾಣೆಯ ತನಿಖಾಧಿಕಾರಿ ಈ ಕುರಿತಾಗಿ ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2 ಶಿವಮೊಗ್ಗದಲ್ಲಿ ನಡೆದಿತ್ತು.  ಸರ್ಕಾರದ ಪರವಾಗಿ ಶ್ರೀಧರ್ ಹೆಚ್ ಆರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಇದೀಗ ತೀರ್ಪು ಹೊರಬಿದ್ದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.