w
Headlines
Home » ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ರೌಡಿ ಖುರೇಷಿ ಸಾವು – 3ಕ್ಕೇರಿದ ಸಾವಿನ ಸಂಖ್ಯೆ

ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ರೌಡಿ ಖುರೇಷಿ ಸಾವು – 3ಕ್ಕೇರಿದ ಸಾವಿನ ಸಂಖ್ಯೆ

ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ರೌಡಿ ಖುರೇಷಿ ಸಾವು – 3ಕ್ಕೇರಿದ ಸಾವಿನ ಸಂಖ್ಯೆ


ಶಿವಮೊಗ್ಗದಲ್ಲಿ ನಿನ್ನೆ ನಡೆದ ಗ್ಯಾಂಗ್ ವಾರ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೌಡಿಶೀಟರ್ ಖುರೇಶಿ ಇಂದು ಸಾವನಪ್ಪಿದ್ದು, ಇದರೊಂದಿಗೆ ಗ್ಯಾಂಗ್ ವಾರ್ ನಲ್ಲಿ ಸಾವನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಶಿವಮೊಗ್ಗದಲ್ಲಿ ನೆನ್ನೆ ಸಂಜೆ ಲಷ್ಕರ್ ಮೊಹಲ್ಲದದ ಮೀನುಮಾರುಕಟ್ಟೆಯ ಬಳಿ ನಡೆದ ಆದಿಲ್ ಮತ್ತು ಯಾಸಿನ್ ಖುರೇಷಿ ನಡುವಿನ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಕೊಲೆಯಾಗಿದ್ದರು.

 ಘಟನೆ ಸಂದರ್ಭದಲ್ಲಿ ಆದಿಲ್ ಹಾಗು ಸಹಚರರು ಯಾಸಿನ್ ಖುರೇಷಿಗೆ ಮಾರಣಾಂತಿಕವಾಗಿ ಎದೆಗೆ ಹಾಗು ಹೊಟ್ಟೆಗೆ ಚಾಕು ತಿವಿದಿದ್ದರಿಂದ ಯಾಸಿನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ.


ತದ ನಂತರದಲ್ಲಿ ರೊಚ್ಚಿಗೆದ್ದ ಯಾಸಿನ್ ಖುರೇಶಿ ಕಡೆಯ ಹುಡುಗರು ಆದಿಲ್ ಸಹಚರರ ಮೇಲೆ ಮಚ್ಚು ಬೀಸಿ ಕಲ್ಲು ಎತ್ತೆಹಾಕಿ ಇಬ್ಬರನ್ನು ಕೊಲೆಗೈದಿದ್ದರು. ನಂತರದಲ್ಲಿ ಸ್ಥಳದಲ್ಲಿ ಕುಸಿದುಬಿದ್ದ ಯಾಸಿನ್ ಖುರೇಷಿಯನ್ನು ಎನ್.ಹೆಚ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಯಾಸಿನ್ ಖುರೇಶಿ ಸಾವನ್ನಪ್ಪಿದ್ದಾನೆ. ನೆನ್ನೆಯ ಮಾರಾಮಾರಿ ಪ್ರಕರಣದಲ್ಲಿ ಒಟ್ಟು ಮೂವರು ಸಾವನ್ನಪ್ಪಿದಂತಾಗಿದೆ. ತಲೆಮೆರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದದ್ದಾರೆ.

ಪ್ರಕರಣವನ್ನು ಗಂಭೀರ ವಿಚಾರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ಇದೆ. ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.