w
Headlines
Home » SSLC RESULT | ರಿಪ್ಪನ್‌ಪೇಟೆ : ರಾಮಕೃಷ್ಣ ವಿದ್ಯಾಲಯಕ್ಕೆ ಸತತ 8ನೇ ಬಾರಿ ಶೇಕಡಾ100% ಫಲಿತಾಂಶ

SSLC RESULT | ರಿಪ್ಪನ್‌ಪೇಟೆ : ರಾಮಕೃಷ್ಣ ವಿದ್ಯಾಲಯಕ್ಕೆ ಸತತ 8ನೇ ಬಾರಿ ಶೇಕಡಾ100% ಫಲಿತಾಂಶ

SSLC RESULT | ರಿಪ್ಪನ್‌ಪೇಟೆ : ರಾಮಕೃಷ್ಣ ವಿದ್ಯಾಲಯಕ್ಕೆ ಸತತ 8ನೇ ಬಾರಿ ಶೇಕಡಾ100% ಫಲಿತಾಂಶ

ರಿಪ್ಪನ್‌ಪೇಟೆ : 2022 23ನೇ ಸಾಲಿನ ಎಸ್ ಎಸ್
ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಲಯ ಈ ಬಾರಿಯೂ ಸಹ ಶೇಕಡ 100% ರಷ್ಟು ಫಲಿತಾಂಶವನ್ನು ಪಡೆದಿದೆ.

ಸತತವಾಗಿ 8ನೇ ಬಾರಿಗೆ 100% ಫಲಿತಾಂಶ ಪಡೆದಿರುವ ರಾಮಕೃಷ್ಣ ವಿದ್ಯಾಲಯದಲ್ಲಿ ಈ ವರ್ಷ 35 ವಿದ್ಯಾರ್ಥಿಗಳು ಪರೀಕ್ಷೆಗೆ
ಕುಳಿತಿದ್ದು 35 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪೋಷಕರಿಗೂ ಹಾಗೂ ಶಿಕ್ಷಣ ಸಂಸ್ಥೆಯವರಿಗೆ ಹೆಮ್ಮೆಯನ್ನು ತಂದಿರುತ್ತಾರೆ.

ರಾಮಕೃಷ್ಣ ಶಾಲೆಯ ದಿಶಾ 625ಕ್ಕೆ 611(96.48%) ಅಂಕ ಗಳಿಸಿದ್ದಾಳೆ.ಇವರು ರಿಪ್ಪನ್‌ಪೇಟೆಯ ಜ್ಯುವೆಲರ್ಸ್ ಮಾಲೀಕರಾದ ಸುರೇಶ್ ಹಾಗೂ ಸುನೀತಾ ದಂಪತಿಗಳ ಪುತ್ರಿಯಾಗಿದ್ದಾರೆ.

ಕುಮಾರಿ ಗಾನವಿ 625ಕ್ಕೆ 580(93%) ಅಂಕ ಗಳಿಸಿದ್ದು,ಇವರು ಅರಸಾಳು ಸಮೀಪದ ಬೆಕ್ಕೋಡು ನಿವಾಸಿ ಕೃಷ್ಣಮೂರ್ತಿ ಮತ್ತು ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದಾರೆ.


ಕುಮಾರಿ ಅನ್ವಿತಾ 625ಕ್ಕೆ 577(92.32%) ಅಂಕ ಗಳಿಸಿದ್ದು,ಇವರು ವಡಗೆರೆ ನಿವಾಸಿ ಶ್ರೀನಿವಾಸ್ ಮತ್ತು ದಂಪತಿಗಳ ಪುತ್ರಿಯಾಗಿದ್ದಾರೆ.

ಶಾಲಿನಿ 576(92.16%) , ರಿದ್ದಿ ರಾಮಗೌಡ 625ಕ್ಕೆ 564(90.24%)
ದರ್ಪಣ್ ವೈ ಹಾನಂಬಿ 625 ಕ್ಕೆ 561 ,ನಮಿತಾ 625ಕ್ಕೆ 542 , ದೀಕ್ಷಾ 540 , ಪ್ರಜ್ವಲ್ 531 ಮತ್ತು ರಾಕೇಶ್ 530 ಅಂಕಗಳನ್ನು ಪಡೆದಿರುತ್ತಾರೆ.

ರಾಮಕೃಷ್ಣ ಶಾಲೆಗೆ ಶೇಕಡಾ100% ಫಲಿತಾಂಶ ತಂದುಕೊಟ್ಟು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಅಭಿನಂದಿಸಿ ಶುಭ ಹಾರೈಸಿದೆ.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.