Headlines

Ripponpete | ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರ ಹೇಗೆ ಸಾಧ್ಯ – ಹರತಾಳು ಹಾಲಪ್ಪ

ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರ ಹೇಗೆ ಸಾಧ್ಯ


ರಿಪ್ಪನ್‌ಪೇಟೆ;-ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಲಿಕ ಹಿನ್ನಲೆ ಅರಿವೇ ಇಲ್ಲದ.ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ ಆಂತವಳಿಗೆ ಮತದಾರರ ಮತಹಾಕಬೇಕಾ.? ಬಗರ್ ಹುಕುಂ ಆರಣ್ಯ ಹಕ್ಕು ಅಂದರೆ ಏನು ಎಂಬುದೇ ಗೊತ್ತಿಲ್ಲದವರು ಸಂಸತ್ ಪ್ರವೇಶ ಮಾಡಿದರೆ ಪ್ರಯೋಜನವಿಲ್ಲ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವಂತಹ ಬಿ.ವೈ.ರಾಘವೇಂದ್ರರನ್ನು ಬೆಂಬಲಿಸುವಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಮತದಾರರಲ್ಲಿ ಮನವಿ ಮಾಡಿದರು.

ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ನಾನು ಶಾಸಕನಾಗಿದ್ದಾಗ ಸರ್ಕಾರದಿಂದ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಸಾಗರ ರಸ್ತೆಯ ಒಂದು ಕೀ.ಮೀ.ದೂರದ ರಸ್ತೆ ಅಗಲೀಕರಣ ಕಾಮಗಾರಿಗೆ ೫.೧೭ ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು ಅಲ್ಲದೇ ಕೇಂದ್ರ ರಾಜ್ಯಸರ್ಕಾರದಿಂದ ಜಲಜೀವನ್ ಯೋಜನೆಯಡಿ ಚಕ್ರ ಡ್ಯಾಂ ನಿಂದ ಹೊಸನಗರ ತಾಲ್ಲೂಕಿನ ವ್ಯಾಪ್ತಿಗೆ ಶುದ್ದಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲು ಸಂಸದ ಬಿ.ವೈ.ರಾಘವೇಂದ್ರ ಮತ್ತು ನಾನು  ಹಾಗೂ ಮಾಜಿ ಗೃಹ ಸಚಿವ ಹಾಲಿ ಶಾಸಕ ಆರಗಜ್ಞಾನೇಂದ್ರ ಸೇರಿಕೊಂಡು ೪೮೫ ಕೋಟಿ ವೆಚ್ಚದ ಕಾಮಗಾರಿಯನ್ನು ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಅನುದಾನಬಿಡುಗಡೆ ಮಾಡಿಸಿ ಪ್ರಧಾನಮಂತ್ರಿ ಮೋದಿಜಿಯವರಿಂದ ಕಾಮಗಾರಿಗೆ ಚಾಲನೆ ಮಾಡಿಸಲಾಗಿದ್ದರೂ ಕೂಡಾ ಈಗೀನ ಶಾಸಕರು ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಶಂಕುಸ್ಥಾಪನೆಗೊಂಡ ಕಾಮಗಾರಿಗೂ ಮೊತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಿದ್ದಾರೆಂದ ಹೇಳಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ೯ ತಿಂಗಳಾದರೂ ಕೂಡಾ ೯ ಪೈಸೆ ಅಭಿವೃದ್ದಿ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ಬರೀ ಗ್ಯಾರಂಟಿ ಯೋಜನೆಗೆ ವಿನಿಯೋಗವಾಗುತ್ತಿದ್ದು ಇದರಿಂದ ಅಭಿವೃದ್ದಿ ಹೇಗೆ ಸಾಧ್ಯ ರಾಜ್ಯ ಅರ್ಥಿಕ ದಿವಾಳಿಯತ್ತ ಸಾಗಿದೆ ಎಂದು ಅರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಗೀತಾರವರ ಮತವೇ ತಮ್ಮ ಮತಕ್ಷೇತ್ರದಲ್ಲಿ ಇಲ್ಲ.ಮತದಾನಕ್ಕಾಗಿ ಬೆಂಗಳೂರಿಗೆ ಹೋಗಿ ಮತದಾನ ಮಾಡಿ ಬಂದಿರುವ ಅವರಿಗೆ ವೋಟು ಹಾಕಬೇಕಾ ಎಂದರು.


ಮಾಜಿ ಶಾಸಕ ಮಾಜಿ ಸಚಿವ ಕುಮಾರ್ ಬಂಗಾರಪ್ಪ  ಮಾತನಾಡಿ ನನ್ನ ಅಕ್ಕನಿಗೆ ರಾಜಕೀಯ ಪರಿಜ್ಞಾನವೇ ಇಲ್ಲ.ಆಂತವಳಿಗೆ ಮತದಾರರ ಮತಹಾಕಬೇಕಾ.ಬಗರ್ ಹುಕುಂ ಆರಣ್ಯ ಹಕ್ಕು ಅಂದರೆ ಏನು ಎಂಬುದೇ ಗೊತ್ತಿಲ್ಲದವರು ಸಂಸತ್ ಪ್ರವೇಶ ಮಾಡಿದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವಂತಹ ಬಿ.ವೈ.ರಾಘವೇಂದ್ರರನ್ನು ಬೆಂಬಲಿಸುವAತೆ ದೊಡ್ಡಸಾಹೇಬರ (ಬಂಗಾರಪ್ಪ) ಹೆಸರು ಮುಂದೆ ಮಾಡಿಕೊಂಡು ಮತದಾರರಲ್ಲಿ ಮತಕೇಳುವ ಕಾಲವೊಂದಿತು ಆದು ಈಗ ಇಲ್ಲ ಬಂಗಾರಪ್ಪನವರ ಹೋರಾಟದ ಮೂಲಕ ಬೆಳೆದು ಬಂದವರು ಇವರು ಯಾವ ಹೋರಾಟ ಮಾಡಿದ್ದಾರೆ.ಕನ್ನಡಕ ಬಣ್ಣದ ಷರಟು ಹಾಕಿಕೊಂಡಾಕ್ಷಣ ಬಂಗಾರಪ್ಪ ಅಗಲು ಸಾಧ್ಯವಿಲ್ಲ ಎಂದು ಸಾಗರ ಕ್ಷೇತ್ರ ಗೋಪಾಲಕೃಷ್ಣ ಬೇಳೂರರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಅವರು ಕಲಾವಿದರು ದೇವರು ಎನ್ನುವ ಡಾ.ರಾಜ್‌ಕುಮಾರ ಎಂದು ರಾಜಕೀಯಕ್ಕೆ ಇಷ್ಟಪಟ್ಟವರಲ್ಲ ಅದರೆ ಸಿನಿಮಾದವರನ್ನು ಕರೆತಂದು ತಮ್ಮ ಪರ ಮಾಡಿದಾಕ್ಷಣ ಮತದಾರ ಮರಳಾಗುವುದಿಲ್ಲ ಎಂದು ಹೇಳಿ ಈ ಭಾರಿಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಧಿಕಾರ ಹಿಡಿಯುತ್ತದೆ ಆ ಕಾರಣದಿಂದ ನಮ್ಮ ರಾಘಣ್ಣನವರು ಗೆಲ್ಲವುದು ಶತಸಿದ್ದ ಎಂದರು.

ಚಿತ್ರನಟಿ ವಿಧಾನಪರಿಷತ್ ಸದಸ್ಯೆ ತಾರಾ ಮಾತನಾಡಿ ಕಾಂಗ್ರೆಸ್ ಸರ್ಕಾರ ದೇಶವನ್ನು ೬೦ ವರ್ಷಗಳಿಂದ ಅಳಿದರೂ ಕೂಡಾ ಮಾಡಲಾಗದ ಸಾಧನೆಯನ್ನು ಕೇಂದ್ರದಲ್ಲಿ ಕೇವಲ ೧೦ ವರ್ಷದ ಬಿಜೆಪಿ ಮೋದಿ ನೇತೃತ್ವದ ಸರ್ಕಾರ ಮಾಡಿದೆ.ಅಲ್ಲದೆ ಇತರ ದೇಶಗಳಿಗೆ ಹೋಗಿ ಕೈಕಟ್ಟಿ ನಿಲ್ಲುತ್ತಿದ್ದ ಕಾಂಗ್ರೆಸ್ ಪ್ರದಾನಿಗಳು ಈಗ ನಮ್ಮ ದೇಶದ ಪ್ರಧಾನಿ ಮೋದಿ ಮುಂದೆ ಇತರ ದೇಶಗಳವರು ಕೈಕಟ್ಟಿಕೊಂಡು ತಲೆ ತಗ್ಗಿಸಿಕೊಂಡು ನಿಲ್ಲುವಂತಾಗಿದೆ ಎಂದು ಹೇಳಿ ಈ ಭಾರಿಯ ಚುನಾವಣೆಯಲ್ಲಿ ಮೊತ್ತೊಮ್ಮ ನಮ್ಮ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ನಾವುಗಳಲ್ಲಾ ಬಿ.ವೈ.ರಾಘವೇಂದ್ರರನ್ನು ಬೆಂಬಲಿಸಿ ಆಶೀರ್ವದಿಸಿ ನಿಮ್ಮ ಸೇವೆಗೆ ನಾವು ಸದಾ ಸಿದ್ದರಾಗಿ ತಮ್ಮ ಋಣವನ್ನು ಸೇವಕನಾಗಿ ತೀರಿಸುತ್ತೇವೆಂದರು.

ಬಿ.ಜೆ.ಪಿ ಅಭ್ಯರ್ಥಿ ಬಿ.ವೈ.ರಾಘವೆಂದ್ರ ಬಹಿರಂಗವಾಗಿ ಮತಯಾಚಿಸಿ ಮಾತನಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಪ್ರಾಮಾಣಿಕವಾಗಿ ತಂದಿದ್ದು ಕೇಂದ್ರದಲ್ಲಿಯೇ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಸಂಕಲ್ಪ ಹೊಂದಿದ್ದೇನೆಂದು ಹೇಳಿ ಇನ್ನೂ ಜಿಲ್ಲೆಯಲ್ಲಿರುವ ಶರಾವತಿ ಸಂಸ್ರತ್ತರ ಮತ್ತು ವಿ.ಐ.ಎಸ್.ಎಲ್ , ಎಂ .ಪಿ.ಎ.ಸೇರಿದಂತೆ ರೈಲ್ವೆ  ಸಂಪರ್ಕ ರಸ್ತೆಯ ಕೊಂಕಣ ರೈಲು ಜೋಡಣೆಗೆ ಶೀಘ್ರವಾಗಿ ವರ್ಷದ ಅವಧಿಯೊಳಗೆ ಅಭಿವೃದ್ದಿ ಪಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ರಾಜಾನಂದಿನಿ,ಕೆರೆಕೈಪ್ರಸನ್ನ,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಎ.ಟಿ.ನಾಗರತ್ನ,ಸುರೇಶಸ್ವಾಮಿರಾವ್. ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ,ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮುಖಂಡರಾದ ಉಮೇಶ್ ಹಾಲಗದ್ದೆ,ಮಂಜುಳ ಕೇತಾರ್ಜಿರಾವ್.ಬಿಜೆಪಿ ತಾಲ್ಲೂಕ್ ಆಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ,ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್,ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ಎನ್.ವರ್ತೇಶ್, ಜಿಎಸ್.ವರದರಾಜ್,ಕಲ್ಲೂರು ಈರಪ್ಪ,   ಎ.ವಿ.ಮಲ್ಲಿಕಾರ್ಜುನ, ಬಿ.ಯುವರಾಜ್,ಎನ್.ಆರ್.ದೇವಾನಂದ,ಆರ್.ಟಿ.ಗೋಪಾಲ,ವೀರೇಶ್ ಅಲುವಳ್ಳಿ, ಸುಂದರೇಶ್, ಎಂ ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಇನ್ನಿತರ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೈಕ್ ರ್ಯಾಲಿ :

ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ಇಲ್ಲಿನ ಯುವಕರ ತಂಡ ಗವಟೂರು ರಸ್ತೆಯಿಂದ ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಮೂಲಕ ಸಾಗರ-ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಬಿಜೆಪಿ ಬಾವುಟ ಕಟ್ಟಿಕೊಂಡು ಬೃಹತ್ ಬೈಕ್ ರ‍್ಯಾಲಿ ನಡೆಸಿ ಮತದಾರರನ್ನು ಜಾಗೃತಗೊಳಿಸಿದರು.

Leave a Reply

Your email address will not be published. Required fields are marked *