Ripponpete | ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ
ರಿಪ್ಪನ್‌ಪೇಟೆ : ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ ದೀಪಾ ಎಸ್.ಹೆಬ್ಬಾರ್, ಹೆಚ್.ಎಸ್.ಸುದೀಂದ್ರಹೆಬ್ಬಾರ್ ಮತ್ತು ಸಹೋದರಿಯರು ರಜತ ಉತ್ಸವದ ಗಣಪತಿ ಮೂರ್ತಿಯನ್ನು’ ದೇವಸ್ಥಾನಕ್ಕೆ ಇಂದು ಮೆರವಣಿಗೆಯ ಮೂಲಕ ತರುವುದರೊಂದಿಗೆ ಸಮರ್ಪಿಸಿದರು.
ಚಂಡೆ ವಾದ್ಯಮೇಳದೊಂದಿಗೆ ಶಿವಮೊಗ್ಗ ರಸ್ತೆಯಲ್ಲಿರುವ ಮನೆಯಿಂದ ರಜತ ಉತ್ಸವ ಮೂರ್ತಿಯನ್ನು ಹೆಚ್.ಎಸ್ ಸುದೀಂದ್ರ ಹೆಬ್ಬಾರ್ ಹೊತ್ತು ಮೆರವಣಿಗೆ ಮೂಲಕ ಸಿದ್ದಿವಿನಾಯಕ ದೇವಸ್ಥಾನಕ್ಕೆ ತಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾತರಿಸಿದರು. ನಂತರ ಶಿವಮೊಗ್ಗದ ವೇ.ಬ್ರ.ವಸಂತಭಟ್ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರಶೇಖರ್‌ಭಟ್.ಮತ್ತು ಗುರುರಾಜಭಟ್ ಇವರು ಉತ್ಸವಮೂರ್ತಿಗೆ ಧಾರ್ಮಿಕ ವಿಧಿವಿಧಾನದೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ ಕಲಾತತ್ವವನ್ನು ತುಂಬಿದರು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್.ಸತೀಶ್, ಗಣೇಶ್‌ಕಾಮತ್, ಎಂ.ಡಿ.ಇಂದ್ರಮ್ಮ, ಎಸ್.ಎನ್.ಬಾಲಚಂದ್ರ,ಹೆಚ್.ಎಸ್.ಕಾಮಾಕ್ಷಿ, ಹೆಚ್.ಎಸ್.ಮೀನಾಕ್ಷಿಕಾರಂತ್, ಕುಸುಮಾಬಾಲಚಂದ್ರ,ಪದ್ಮಾಸುರೇಶ್,ನಿವೃತ್ತ ಶಿಕ್ಷಕ ರಾಧಾಕೃಷ್ಣ, ಆರ್ ರಾಘವೇಂದ್ರ,ರಂಜಿತ್, ಮುರುಳೀಧರ ಜೋಯ್ಸ್, ವೈ.ಜೆ.ಕೃಷ್ಣ,ಜಯಲಕ್ಷಿ ಮೋಹನ್, ದೇವಸ್ಥಾನ ಸೇವಾ ಸಮಿತಿಯವರು ಗ್ರಾಮಸ್ಥರು ಹಾಜರಿದ್ದರು.