Ripponpete | ನಕಾಶೆ ಕಂಡ ಗ್ರಾಮಪಂಚಾಯ್ತಿ ರಸ್ತೆಯಲ್ಲಿ ಮೆಸ್ಕಾಂ ವಿದ್ಯುತ್ ಕಂಬ ಅಳವಡಿಕೆ – ಬಡಾವಣೆ ನಿವಾಸಿಗಳ ಆಕ್ರೋಶ
ರಿಪ್ಪನ್‌ಪೇಟೆ;-ಇಲ್ಲಿನ ಸಾಗರ ರಸ್ತೆಗೆ ಸಂಪರ್ಕಿಸುವ ಗ್ರಾಮ ಪಂಚಾಯ್ತಿ ಹಿಂಭಾಗದ ನಕಾಶೆ ಕಂಡ ರಸ್ತೆಯ ಮಧ್ಯದಲ್ಲಿ ವಿದ್ಯುತ್‌ಕಂಬವನ್ನು ಅಳವಡಿಸಿರುವುದರ ಬಗ್ಗೆ ಸಾರ್ವಜನಿಕರು ಮೆಸ್ಕಾಂ ಇಲಾಖೆಯ ವಿರುದ್ದ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ನಕಾಶೆ ಕಂಡ ರಸ್ತೆಯನ್ನು ಆಕ್ರಮಸಿಕೊಳ್ಳುತ್ತಿದ್ದಾರೆಂದು ನ್ಯಾಯಾಲಯದಲ್ಲಿ ಈ ಹಿಂದೆ ರಸ್ತೆಯ ನಿವಾಸಿಗಳು ದೂರು ದಾಖಲಿಸಿದ್ದು ನ್ಯಾಯಾಲಯ ಸಾರ್ವಜನಿಕರ ಮನವಿಗೆ ಸ್ಪಂದಿಸಿ 8 ಅಡಿ ಅಗಲದ ಸಂಪರ್ಕ ರಸ್ತೆಗೆ ಓಡಾಡಲು ಮುಕ್ತ ಅವಕಾಶ ನೀಡಿ ಅದೇಶವನ್ನು ನೀಡಲಾಗಿದ್ದರೂ ಕೂಡಾ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ಸಂಬಂಧಿಸಿದ ಅಧಿಕಾರಿಗಳು ಏಕಾಏಕಿ ರಸ್ತೆಯಲ್ಲಿ ಮೆಸ್ಕಾಂ ಕಂಬವನ್ನು ಅಳವಡಿಸಿರುತ್ತಾರೆ.
ಸಾಗರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ-26 ರಲ್ಲಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಈ ಎರಡು ರಾಜ್ಯ ಹೆದ್ದಾರಿ ಸಂಪರ್ಕದ ರಸ್ತೆಯ ದ್ವಿಪಥ ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರಸ್ತೆ ಆಗಲೀಕರಣ ಕಾಮಗಾರಿ ಆರಂಭಿಸಲಾಗಿ ಒಂದು ವರ್ಷಗಳಾಗುತ್ತಾ ಬಂದರೂ ಕೂಡಾ ಇನ್ನೂ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದ್ದು ವಿನಾಯಕ ವೃತ್ತದ ಬಳಿಯ ಪಾತ್ರೆ ಅಂಗಡಿಯ ಬಳಿ ಬಾಕ್ಸ್ ಚರಂಡಿಗೆ ಹೊಂದಿಕೊಂಡಂತೆ ಇರುವ ಅಂಗಡಿಯನ್ನು ತೆರವು ಮಾಡದೆ ಈಗ ಆವರ ಕಟ್ಟಡ ಬಳಿಯ ಈ ಡಿವೇಶನ್ ನಕಾಶೆ ಕಂಡ ರಸ್ತೆಯ ಮಧ್ಯದಲ್ಲಿ ಮೆಸ್ಕಾಂ ಇಲಾಖೆಯವರು ಆವೈಜ್ಞಾನಿಕವಾಗಿ ಕಂಬವನ್ನು ಆಳವಡಿಸಿರುವುದರಿಂದ ಸಾರ್ವಜನಿಕರು ಓಡಾಡಂತಾಗಿದೆ ಎಂದು ಈ ರಸ್ತೆಯ,ನಿವಾಸಿಗಳಾದ ಜಿ.ಕೆ.ಆನಂತಶಾಸ್ತಿ, ಭದ್ರಪ್ಪಗೌಡ,ಗುರುಮೂರ್ತಿ, ಶಿವರಾಜ್ ಪ್ರಭು, ಶೈಲಾ ಆರ್.ಪ್ರಭು. ಹಿಟ್ಟಿನ ಗಿರಣಿ ರಘವೇಂದ್ರ,ಇನ್ನಿತರ ಹಲವರು ಆರೋಪಿಸಿ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮೂಲಕ ಸಂಬಂಧ ಪಟ್ಟ ಇಲಾಖೆಯ ಗುತ್ತಿಗೆದಾರ ಮತ್ತು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.