Headlines

ನಗರ ದರ್ಗಾ ಅಭಿವೃದ್ಧಿಗೆ 4ಕೋಟಿ ಅನುದಾನ ನೀಡಲಾಗುವುದು – ರಾಜ್ಯ ವಕ್ಪ್ ಅಧ್ಯಕ್ಷ ಕೆ ಅನ್ವರ್

ನಗರ ದರ್ಗಾ ಅಭಿವೃದ್ಧಿಗೆ 4ಕೋಟಿ ಅನುದಾನ ನೀಡಲಾಗುವುದು – ರಾಜ್ಯ ವಕ್ಪ್ ಅಧ್ಯಕ್ಷ ಕೆ ಅನ್ವರ್


ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ 50ನೇ ವರ್ಷದ ಉರೂಸ್ ಸಂಭ್ರಮ

ಐತಿಹಾಸಿಕ ಹಿನ್ನಲೆ ಹೊಂದಿರುವ ಸರ್ವ ಧರ್ಮಗಳ ಪುಣ್ಯ ಕ್ಷೇತ್ರ ಬಿದನೂರಿನ ಹಜರತ್ ಶೇಖುಲ್ ಅಕ್ಬರ್ ಅನ್ವರ ಮಅಶುಂಷಾ ವಲಿಯುಲ್ಲಾ ದರ್ಗಾವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಥದತ್ತ ಕೊಡೊಯ್ಯಲಾಗುವುದು ಈ ಹಿನ್ನಲೆಯಲ್ಲಿ 4 ಕೋಟಿ ರೂ ಹಣವನ್ನು ಮಂಜೂರು ಮಾಡಿಸಿಕೊಡಲಾಗುವುದು ಎಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷ ಕೆ ಅನ್ವರ್ ಹೇಳಿದರು.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಜರತ್ ಶೇಖುಲ್ ಅಕ್ಬರ್ ಅನ್ವರ ಮಅಶುಂಷಾ ವಲಿಯುಲ್ಲಾ ದರ್ಗಾದಲ್ಲಿ ದರ್ಗಾದಲ್ಲಿ ಮೇ 24. ರಂದು ಆರಂಭಗೊಂಡ 50ನೇ ವರ್ಷದ ಉರೂಸ್ ಉತ್ಸವದ ಸಂದಲ್ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಅಪಾರ ಭಕ್ತಾಧಿಗಳನ್ನು ಹೊಂದಿರುವ ನಗರ ದರ್ಗಾಕ್ಕೆ ತೆರಳುವ ರಸ್ತೆ ಕಾಮಗಾರಿಗೆ 2 ಕೋಟಿ ರೂ ಹಾಗೂ ಭಕ್ತಾಧಿಗಳು ತಂಗಲು ಕೊಠಡಿಗಳು(ಮುಸಾಫ಼ಿರ್ ಖಾನಾ) ನಿರ್ಮಾಣಕ್ಕೆ 2 ಕೋಟಿ ರೂ ಅನುದಾನವನ್ನು ವಕ್ಫ ಬೋರ್ಡ್ ವತಿಯಿಂದ ನೀಡುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ದರ್ಗಾ ಸಮಿತಿಯ ಉಪಾಧ್ಯಕ್ಷ ಅರ್ ಎ ಚಾಬುಸಾಬ್ ಬಿದನೂರಿನ ಹಜರತ್ ಶೇಖುಲ್ ಅಕ್ಬರ್ ಅನ್ವರ ಮಅಶುಂಷಾ ವಲಿಯುಲ್ಲಾ ದರ್ಗಾದಲ್ಲಿ ನಡೆಯುವ ಉರೂಸ್ ಸಂಧರ್ಭದಲ್ಲಿ ಪ್ರತಿ ವರ್ಷ ಭಕ್ತಾಧಿಗಳಿಗೆ ಅಗತ್ಯವಿರುವ ರಸ್ತೆ , ಭೋಜನ ಶಾಲೆ, ಕುಡಿಯುವ ನೀರಿನ ಯೋಜನೆ ಹಾಗೂ ತಂಗುದಾಣದ ಬೇಡಿಕೆಯನ್ನು ಸವಿಸ್ತಾರವಾಗಿ ವಿವರಿಸಿ ಸಮಿತಿಯ ಪರವಾಗಿ ರಾಜ್ಯ ವಕ್ಫ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ದರ್ಗಾ ಸಮಿತಿಯ ಅಧ್ಯಕ್ಷರಾದ ಜಿ ಮಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ವಕ್ಪ್ ಸಮಿತಿಯ ಸದಸ್ಯರಾದ ಶಾಪಿ ಸಅದಿ , ಜಿ ಯಾಕೂಬ್ ಹೊಸನಗರ ಹಾಗೂ ದರ್ಗಾ ಸಮಿತಿ ಸದಸ್ಯರು , ವಕ್ಪ್ ಬೋರ್ಡ್ ನ ಸದಸ್ಯರು ಜಿಲ್ಲೆಯ ಮಸೀದಿ ಸಮಿತಿಗಳ ಅಧ್ಯಕ್ಷರು ಹಾಗೂ ಇನ್ನಿತರರಿದ್ದರು.

ಉರೂಸ್‌ ಹಿನ್ನೆಲೆ: 

ಹಿರಿಯ ಸ್ವಾತಂತ್ರ ಹೋರಾಟಗಾರ ಎನ್. ವೆಂಕಟರಮಣ ಉಡುಪರಿಗೆ 46 ವರ್ಷದ ಹಿಂದೆ ಅವರ ಕನಸ್ಸಿನಲ್ಲಿ ಬಂದ ಹಝ್ರತ್ ಅವರು ಜನವಸತಿ ಇರದ ನಿರ್ಜನ ಪ್ರದೇಶವೊಂದರಲ್ಲಿ ನೆಲೆನಿಂತಿದ್ದು ವರ್ಷಂಪ್ರತಿ ಉರೂಸ್ ಆಚರಿಸಲು ಸೂಚನೆ ನೀಡಿದ್ದರು. ಆನಂತರ ಸಿ.ವೆಂಕಟರಮಣ ಉಡುಪರ ನೇತೃತ್ವದಲ್ಲಿ ಉರೂಸ್ ನಡೆಯುತ್ತಾ ಬಂದಿದೆ. ಅವರ ಕಾಲಾ ನಂತರ ಅವರ ಮಗ ವಿನಾಯಕ ಉಡುಪರ ನೇತೃತ್ವದಲ್ಲಿ ಮುಂದುವರಿದಿದೆ. ಹಿಂದೂ-ಮುಸ್ಲಿಮ್ ಭಾವೈಕ್ಯತಾ ತಾಣವಾಗಿ ನಗರ ದರ್ಗಾ ಮಹತ್ವ ಪಡೆದಿದೆ. ವರ್ಷಂ ಪ್ರತಿ ನಡೆಯುವ ಉತ್ಸವದಲ್ಲಿ ಮುಸ್ಲಿಮ್ ಸಮುದಾಯ ಮಾತ್ರವಲ್ಲದೆ ಬಹುತೇಕ ಹಿಂದೂಗಳು ಈ ದರ್ಗಾಕ್ಕೆ ಬರುತ್ತಿರುವುದು ಇಲ್ಲಿಯ ವಿಶೇಷವಾಗಿದೆ.

Leave a Reply

Your email address will not be published. Required fields are marked *