w
Headlines
Home » ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು | KSE

ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು | KSE

ಶಿಕಾರಿಪುರದಲ್ಲಿ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ – ಈಶ್ವರಪ್ಪ ಗುಡುಗು


ಶಿವಮೊಗ್ಗ : ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ದುಡ್ಡು ನಡೆಯಲ್ಲ, ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ, ಬಿಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಅವರ ಸ್ಥಿತಿ ನೋಡಿಕೊಳ್ಳಲಿ. ಲಿಂಗಾಯತರಾದಿಯಾಗಿ ಎಲ್ಲರೂ ಅವರ ಕುಟುಂಬದ ಬಗ್ಗೆ ಜರಿಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ದುಡ್ಡು ನಡೆಯಲ್ಲ. ಶಿಕಾರಿಪುರದಲ್ಲಿ ಅಪ್ಪ-ಮಕ್ಕಳ ಶಿಕಾರಿ ಮಾಡುತ್ತೇನೆ ಎಂದರು. 

ನ್ಯಾಯಾಲಯದಲ್ಲಿ ವಕೀಲರನ್ನು ಭೇಟಿಯಾಗಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ನಿಮ್ಮ ಉದ್ದೇಶ ಸರಿಯಿದೆ. ನೀವು ಗೆಲ್ಲಿಸಲು ಎಲ್ಲ ರೀತಿಯಲ್ಲೂ ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದೇನೆ. ನಾರಿ ಶಕ್ತಿ, ಯುವ ಶಕ್ತಿ, ರೈತ ಶಕ್ತಿ ನನ್ನ ಬೆಂಬಲಕ್ಕೆ ನಿಂತಿದೆ. ಹೋದೆಡೆಯೆಲ್ಲಾ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನನ್ನ ಗೆಲುವು ನಿಶ್ಚಿತ ಎಂದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.