w
Headlines
Home » Shivamogga | ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ

Shivamogga | ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ

ಶಿವಮೊಗ್ಗ : ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತಿದ್ದ ಆರೋಪಿಯನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.


ಗೋಪಾಳ ನಿವಾಸಿ ಸಮೀರ್ @ ಸಯ್ಯದ್ ಸಮೀರ್ ಬಂಧಿತ ಆರೋಪಿಯಾಗಿದ್ದಾನೆ. 

ನಗರದ ಕಾಮತ್ ಲೇಔಟ್ ನ ಖಾಲಿ ಜಾಗದಲ್ಲಿ ಆಟೋ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ 23 ವರ್ಷದ ಯುವಕನನ್ನ‌ ಬಂಧಿಸಲಾಗಿದೆ.

ನಡೆದಿದ್ದೇನು..???

ದಿನಾಂಕ: 08-04-2024 ರಂದು ಮದ್ಯಾಹ್ನ ತುಂಗಾ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಮತ್‌ ಲೇಔಟ್‌ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಆಟೋ ಒಂದನ್ನು ನಿಲ್ಲಿಸಿಕೊಂಡು, ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಎಸ್ಪಿ ಮಿಥುನ್ ಕುಮಾರ್ ಜಿ ಕೆ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಹಾಗೂ ಕಾರಿಯಪ್ಪ ಎ ಜಿ  ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಾಬು ಆಂಜನಪ್ಪ ತುಂಗನಗರದ ಪಿಐ ಮಂಜುನಾಥರವರ ಮೇಲ್ವಿಚಾರಣೆಯಲ್ಲಿ, ಪಿಎಸ್ಐ ರಘುವೀರ್,  ಹಾಗೂ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಗೋಪಾಳದ ಸಮೀರ @ ಸಯ್ಯದ್‌ ಸಮೀರ (23) ಈತನನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು ಮೌಲ್ಯ 10,000 /- ರೂ ಗಳ 250 ಗ್ರಾಂ ಒಣ ಗಾಂಜಾ, ರೂ 400 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಆಟೋವನ್ನು ಅಮಾನತು ಪಡಿಸಿಕೊಳ್ಳಲಾಗಿದೆ. 

ತುಂಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌





Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.