w
Headlines
Home » Hombuja | ಭಕ್ತರ ಸದೀಚ್ಛೆ ಧರ್ಮಪಥದಲ್ಲಿರಲಿ : ಹೊಂಬುಜಾ ಶ್ರೀಗಳು

Hombuja | ಭಕ್ತರ ಸದೀಚ್ಛೆ ಧರ್ಮಪಥದಲ್ಲಿರಲಿ : ಹೊಂಬುಜಾ ಶ್ರೀಗಳು

ಭಕ್ತರ ಸದೀಚ್ಛೆ ಧರ್ಮಪಥದಲ್ಲಿರಲಿ : ಹೊಂಬುಜಾ ಶ್ರೀಗಳು


ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾಗತ ವಾರ್ಷಿಕ ರಥೋತ್ಸವ ಮಹೋತ್ಸವವು ಆರು ದಿನಗಳ ಪರ್ಯಂತ ವಿವಿಧ ಜಿನಾಗಮ ಶಾಸ್ತೋಕ್ತ ಪೂಜೆ, ಆರಾಧನೆ, ಉತ್ಸವಾದಿಗಳು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನಿತ್ಯವಿಧಿ ಸಹಿತ ಪೂಜಾ ವಿಧಾನಗಳು, ಕುಂಕುಮೋತ್ಸವವು ಸಾಂಗವಾಗಿ ಏರ್ಪಟ್ಟಿತ್ತು. ಕುಮದ್ವತಿ ತೀರ್ಥದಲ್ಲಿ ಉತ್ಸವ ಮೂರ್ತಿಯ ಅವಭೃತ ಸ್ನಾನದ ಬಳಿಕ ಸಾಲಾಂಕೃತ ಪಲ್ಲಕ್ಕಿ ಆ ಬಳಿಕ ಗಜವಾಹನದಲ್ಲಿ ಶ್ರೀ ದೇವರ ಬಿಂಬವನ್ನು ಜಿನಾಲಯಕ್ಕೆ ಸ್ವಸ್ತಿಶ್ರೀ ಸ್ವಾಮೀಜಿಯವರು ಬರಮಾಡಿಕೊಂಡರು. ಅಷ್ಟಾವಧಾನದ ನಂತರ ಧ್ವಜಾವರೋಹಣಗೈದು ಶ್ರೀ ಪದ್ಮಾವತಿ ದೇವಿ ಬಿಂಬವನ್ನು ಜಿನಾಲಯದಲ್ಲಿ ಪೂಜಿಸಲಾಯಿತು.

ಮಹಾಪೂಜೆಯ ಮಹಾಮಂಗಳಾರತಿ ಸಂದರ್ಭದಲ್ಲಿ ಭಕ್ತರು ಶ್ರೀ ಪದ್ಮಾವತಿ ಮತಾಕೀ ಜೈ, ಶ್ರೀ ಪಾರ್ಶ್ವನಾಥ ಕೀ ಜೈ, ಶ್ರೀ ಜೈನ ಧರ್ಮಕೀ ಜೈ ಎಂದು ಭಕ್ತಿಪೂರ್ವಕ ಜಯಕಾರ ಮೊಳಗಿಸಿದರು.

ಧರ್ಮ ಸಂದೇಶ :

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ತಮ್ಮ ಜೀವನದಲ್ಲಿ ನಿತ್ಯವೂ ಧರ್ಮಪಥದಲ್ಲಿ ಸಾಗಿದಾಗ ಇಷ್ಟಾರ್ಥ, ಸದೀಚ್ಛೆ ಲಭಿಸುತ್ತದೆ ಎಂಬ ಧರ್ಮ ಸಂದೇಶ ನೀಡಿದರು.

ಗ್ರಾಮಸ್ಥರಿಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಣೆ :

ಹುಂಚ ಜಾತ್ರೆ ಮಹಾರಥೋತ್ಸವದ ಪ್ರಯುಕ್ತ ಶ್ರೀ ಮುತ್ತೇಶ್ವರ ಸ್ವಾಮಿ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮ ನೆರವೇರಿತು.


ಈ ಸಂದರ್ಭದಲ್ಲಿ ಗ್ರಾಮದ ಸ್ನೇಹಿತರು ಹಿರಿಯರು ಪಾಲ್ಗೊಂಡಿದ್ದರು, ಶ್ರೀಕಾಂತ್ ಚಂದನ್ ಪುಂಡಲೀಕ ಬಾಬು, ಉಲ್ಲಾಸ, ವಿನಯ್ , ಮನು, ಧನುಶ್, ಗುರುರಾಜ,ಸಂಪತ್, ಮತ್ತಿತರರು ಉಪಸ್ಥಿತರಿದ್ದರು ಮತ್ತು ನಾಗಭೂಷಣ ಭಟ್ ಮತ್ತು ಜಯಕರ್ನಾಟಕ ಸಂಘಟನೆ, ಅನ್ಮೋಲ್ ಕಿರಣ್ ಅವರು ಸಲಹೆ ಸಹಾಯ ನೀಡಿದರು,

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.