Headlines

Accident | ಬೈಕ್ ಅಪಘಾತ – ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಸಾವು !

Accident | ಬೈಕ್ ಅಪಘಾತ – ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಸಾವು !


ತೀರ್ಥಹಳ್ಳಿ: ಮೃತಪಟ್ಟ ತನ್ನ ಅಜ್ಜಿಯ ಅಂತಿಮ ದರ್ಶನಕ್ಕೆ ಬರುತ್ತಿದ್ದ ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾದ ಘಟನೆ ಗುರುವಾರ ಶಿವಮೊಗ್ಗ ಸಮೀಪದ ಹೊಳೆಹೊನ್ನೂರು ಬಳಿ ನಡೆದಿದೆ.

ತೀರ್ಥಹಳ್ಳಿ ತಾಲೂಕು ಹೊಸೂರು ಗುಡ್ಡೆಕೇರಿಯ ಪವನ್ (28) ಮತ್ತು ಧನುಷ್ ಆಚಾರಿ (24) ಬೈಕಿನಲ್ಲಿ ಬರುವಾಗ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವು ಕಂಡಿದ್ದು, ಓರ್ವ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.

ಸಾವಿಗೀಡಾಗಿದ್ದ ಅಜ್ಜಿಯೊಬ್ಬರ ಅಂತಿಮ ದರ್ಶನ ಮಾಡಲು ಬೆಂಗಳೂರಿಂದ ಬೈಕಿನಲ್ಲಿಚಿತ್ರದುರ್ಗ ಮಾರ್ಗವಾಗಿ ಬರುತ್ತಿದ್ದ ವೇಳೆ ಲಾರಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್ ಒಂದು ಅಡ್ಡ ಬಂದಿದೆ. ಆ ಬೈಕ್ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತ ಪಟ್ಟು ಮತ್ತೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Leave a Reply

Your email address will not be published. Required fields are marked *