Ripponpete | 80ಸಾವಿರ ರೂ ಮೌಲ್ಯದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ ನಾಗರಾಜ್ ಶೆಟ್ಟಿ
ರಿಪ್ಪನ್‌ಪೇಟೆ : ಸ್ವಾರ್ಥಿಗಳ ಪ್ರಪಂಚದಲ್ಲಿ ಒಂದಷ್ಟು ಮಂದಿ ಒಳ್ಳೆಯವರು ಇರುತ್ತಾರೆ ಎಂಬುದಕ್ಕೆ ಪಟ್ಟಣದ ಕಾರು ಚಾಲಕ ನಾಗರಾಜ್ ಶೆಟ್ಟಿಯೇ ಉತ್ತಮ ನಿದರ್ಶನ.
ಕಾರಿನಲ್ಲಿ ಬಿಟ್ಟು ಹೋಗಿದ್ದ ಅಂದಾಜು 80 ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೈಟ್ ನ್ನು (Gold jewelleries) ಕಾರು ಚಾಲಕ (Car Driver) ನಾಗರಾಜ್ ಶೆಟ್ಟಿ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ (Humanity) ಮರೆದಿದ್ದಾರೆ.
ನಾಗರಾಜ್ ಶೆಟ್ಟಿಯವರ ಕಾರನ್ನು ಈಚಲುಕೊಪ್ಪ ಗ್ರಾಮದ ಕೃಷ್ಣಚಾರ್ ಎಂಬುವವರು ತಮ್ಮ ಮಗನ ಮದುವೆ ಕಾರ್ಯಕ್ರಮಕ್ಕಾಗಿ ಮಾರಣಕಟ್ಟೆಗೆ ಬಾಡಿಗೆಗೆ ಕರೆದೊಯ್ದಿದ್ದರು. ವಾಪಾಸು ಹಿಂದಿರುಗುವಾಗ ಮಧುಮಗನ ಬ್ರಾಸ್ಲೈಟ್ ಕಳೆದುಹೋಗಿದ್ದು ಕಾರು ಸೇರಿದಂತೆ ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದ ಹಿನ್ನಲೆಯಲ್ಲಿ ನಿರಾಸೆಯಿಂದ ತೆರಳಿದ್ದಾರೆ.
ಇಂದು ನಾಗರಾಜ್ ಶೆಟ್ಟಿ ಕಾರನ್ನು ತೊಳೆಯುವಾಗ ಡ್ರೈವರ್ ಸೀಟಿನ ಅಡಿಯಲ್ಲಿ ಸಿಲುಕಿಕೊಂಡಿದ್ದು ಗಮನಕ್ಕೆ ಬಂದಿದೆ.ಕೂಡಲೇ ಕೃಷ್ಣಾಚಾರ್ ರವರಿಗೆ ಕರೆ ಮಾಡಿ ಬ್ರಾಸ್ಲೈಟ್ ನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ನಾಗರಾಜ್ ಶೆಟ್ಟಿ ರವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.