Headlines

ಕಾಂಗ್ರೆಸ್ ಕಾರ್ಪೋರೆಟರ್ ಮಗಳ ಕೊಲೆ – ಪ್ರೀತಿ ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಕಾಂಗ್ರೆಸ್ ಕಾರ್ಪೋರೆಟರ್ ಮಗಳ ಕೊಲೆ – ಪ್ರೀತಿ ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಬ್ಬ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಎನ್ನುವರ ಪುತ್ರಿ ನೇಹಾಳನ್ನು ಇಂದು (ಏಪ್ರಿಲ್ 18) ಬಿವಿಬಿ ಕಾಲೇಜ್ ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹಾಡಹಗಲೆ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ನಲ್ಲಿರುವಾಗಲೇ ಹತ್ಯೆ ನಡೆದಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಮೃತದೇಹವನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಇನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು, ಕೊಲೆ ಆರೋಪಿ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿ ಫಯಾಜ್ ಎನ್ನುವಾತನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದವರು ವಿದ್ಯಾರ್ಥಿನಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಘಟನೆಯಿಂದ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ.

ಫಯಾಜ್‌ನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ನೇಹಾ, ತಂದೆ- ತಾಯಿ ಗಮನಕ್ಕೆ ತಂದಿದ್ದರು. ಪುತ್ರಿಯ ತಂಟೆಗೆ ಬಾರದಂತೆ ತಂದೆಯವರು ಫಯಾಜ್‌ಗೆ ಎಚ್ಚರಿಕೆ ನೀಡಿದ್ದರು’ ಎಂದು ಅವರು ತಿಳಿಸಿದ್ದಾರೆ.

ಕಿಮ್ಸ್‌ ಆಸ್ಪತ್ರೆಯಲ್ಲಿ ನೇಹಾ ಮೃತದೇಹ ಕಂಡು ತಾಯಿ ಗೀತಾ ಹಿರೇಮಠ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

‘ನಮ್ಮ ಮಗಳು ನೇಹಾ ಬಹಳ ಸಂಪನ್ನೆ. ಯಾರೊಂದಿಗೆ ಗಲಾಟೆ ಮಾಡಿದವಳಲ್ಲ. ಬೆಳಿಗ್ಗೆ ನಾನೇ ಕಾಲೇಜಿಗೆ ಕಳುಹಿಸಿದ್ದೆ. ಕಾಲೇಜು ಮುಗಿಯುತ್ತಿದ್ದಂತೆ ನನಗೆ ಫೋನ್‌ ಮಾಡಿ, ಅಮ್ಮ ಕಾಲೇಜು ಮುಗಿಯಿತು. ಬರುತ್ತಿರುವೆ ಎಂದು ಹೇಳಿ ಹತ್ತು ನಿಮಿಷವಾಗಿರಲಿಲ್ಲ. ಅಷ್ಟರಲ್ಲಿ ಆಕೆಯ ಸಾವಿನ ಸುದ್ದಿ ಬಂತು’ ಎಂದು ತಾಯಿ ಗೀತಾ ಹಿರೇಮಠ ಮತ್ತು ಚಿಕ್ಕಮ್ಮ ಶೈಲಶ್ರೀ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.

‘ನೇಹಾಗೆ ಕೆಲ ತಿಂಗಳ ಹಿಂದೆಯಷ್ಟೆ ಕಾಲೇಜಿಗೆ ಸೇರಿಸಿದ್ದೆವು. ಆಕೆಗೆ ಆರೋಪಿಯಿಂದ ತೊಂದರೆ ಆಗುತ್ತಿರುವುದು ಗೊತ್ತಾಗಿತ್ತು. ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು’ ಎಂದು ನೇಹಾ ಚಿಕ್ಕಪ್ಪ ಶಿವಕುಮಾರ್ ಒತ್ತಾಯಿಸಿದರು.


ಪ್ರೀತಿ ನಿರಾಕರಿಸಿದ್ದಕ್ಕೆ ಚಾಕು ಹಾಕಿದ ಫಯಾಜ್

ಕೊಲೆಯಾದ ನೇಹಾ ಹಿರೇಮಠ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಇನ್ನು ಕೊಲೆ ಆರೋಪಿ ಫಯಾಜ್‌ ಸಹ ಅದೇ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಾಗಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ನೇಹಾಳನ್ನು ಕೊಲೆ ಮಾಡಿದ್ದಾನೆ. ಕಳೆದ ಕೆಲ ದಿನಗಳಿಂದ ಪ್ರೀತಿಸುವಂತೆ ನೇಹಾಳ ಬೆನ್ನುಬಿದ್ದಿದ್ದ. ಆದ್ರೆ, ನೇಹಾ ಪ್ರೀತಿಗೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಫಯಾಜ್, ನೇಹಾಳ ಕುತ್ತಿಗೆಯ 2 ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *