Headlines

ಬೈಕ್ ಹಾಗೂ ಆಪೆ ನಡುವೆ ಅಪಘಾತ – ಬೈಕ್ ಸವಾರನ ಕೈ ಕಟ್ , ಸ್ಥಳದಲ್ಲಿಯೇ ಸಾವು | accident

ಬೈಕ್ ಹಾಗೂ ಆಪೆ ನಡುವೆ ಅಪಘಾತ – ಬೈಕ್ ಸವಾರನ ಕೈ ಕಟ್ , ಸ್ಥಳದಲ್ಲಿಯೇ ಸಾವು | accident


ಆಪೆ ಗಾಡಿಗೆ ಬೈಕ್‌ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಗಾಜನೂರು ಬಳಿಯಲ್ಲಿ ನಡೆದಿದೆ.

ಗಾಜನೂರು ಸಮೀಪದ ವೀರಾಪುರದ ಬಳಿಯ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಟೈಲ್ಸ್‌ ತುಂಬಿಕೊಂಡು ಬರುತ್ತಿದ್ದ ಆಪೆ ಗಾಡಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರನಿಗೆ ಗಂಭೀರ ಪೆಟ್ಟು ಬಿದ್ದು ‍ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಸೊರಬ ಮೂಲದವನೆಂದು ಗುರುತಿಸಿಲಾಗಿದೆ.


ಅಪಘಾತದಲ್ಲಿ ಬೈಕ್‌ ಸವಾರನ ಒಂದು ಕೈ ಸಂಪೂರ್ಣವಾಗಿ ತುಂಡಾಗಿ ರಸ್ತೆ ಬದಿಗೆ ಹಾರಿ ಬಿದ್ದಿತ್ತು. ಇನ್ನೂ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ. 

ಆಂಬುಲೆನ್ಸ್ ಬರುವಷ್ಟರಲ್ಲಿ ಬೈಕ್ ಸವಾರನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇನ್ನೂ ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *