w
Headlines
Home » ರಿಪ್ಪನ್‌ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ..??ಈ ಸುದ್ದಿ ನೋಡಿ |PSI

ರಿಪ್ಪನ್‌ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ..??ಈ ಸುದ್ದಿ ನೋಡಿ |PSI

ರಿಪ್ಪನ್‌ಪೇಟೆ : ಇಲ್ಲಿನ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಬಂಕಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿಂಗಪ್ಪ ಕರಕಣ್ಣನವರ ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು ಚುನಾವಣೆ ನಂತರ ಮರು ವರ್ಗಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ-2024 ಕ್ಕೆ ಸಂಬಂದಿಸಿದಂತೆ ಉಲ್ಲೇಖ [1] ರ ಮಾನ್ಯ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗೊಳಪಟ್ಟು ಹಾಗೂ ಪೊಲೀಸ್ ಪ್ರಧಾನ ಕಛೇರಿಯ ಪತ್ರದಲ್ಲಿನ ನಿರ್ದೇಶನಗಳನ್ವಯ ವರ್ಗಾವಣೆ ಪ್ರಕ್ರಿಯೆಗಳನ್ನು ಕುರಿತು ದಿನಾಂಕ:28/01/2024 ರಂದು ನಡೆಸಲಾದ ಪೊಲೀಸ್ ಸಿಬ್ಬಂದಿ ಮಂಡಳಿಯ ತೀರ್ಮಾನದಂತೆ ಪೂರ್ವ ವಲಯದ ಅಧೀನದಲ್ಲಿ ಬರುವ ಶಿವಮೊಗ್ಗ ಜಿಲ್ಲಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ರವರುಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.