w
Headlines
Home » Thirthahalli | ಯುವಪತ್ರಕರ್ತ ಅರುಣ್ ಮಂಜುನಾಥ್ ಗೆ ಒಲಿದ ಕಾಯಕಯೋಗಿ ರಾಜ್ಯ ಪ್ರಶಸ್ತಿ

Thirthahalli | ಯುವಪತ್ರಕರ್ತ ಅರುಣ್ ಮಂಜುನಾಥ್ ಗೆ ಒಲಿದ ಕಾಯಕಯೋಗಿ ರಾಜ್ಯ ಪ್ರಶಸ್ತಿ

Thirthahalli | ಯುವಪತ್ರಕರ್ತ ಅರುಣ್ ಮಂಜುನಾಥ್ ಗೆ ಒಲಿದ ಕಾಯಕಯೋಗಿ ರಾಜ್ಯ ಪ್ರಶಸ್ತಿ


– ಹಾವೇರಿಯಲ್ಲಿ ದ್ವಿತೀಯ ಮಹಿಳಾ ಸಮ್ಮೇಳನ_೨೦೨೪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

ಶಿವಮೊಗ್ಗ : ದಿ 28 ಭಾನುವಾರ ಕರುನಾಡ ಹಣತೆ ಕವಿ ಬಳಗ.(.ರಿ) ಚಿತ್ರದುರ್ಗ ಮಹಿಳಾ ಇದರ ವತಿಯಿಂದ ದ್ವಿತೀಯ ಸಮ್ಮೇಳನದಲ್ಲಿ ತೀರ್ಥಹಳ್ಳಿಯ ಯುವ ಪತ್ರಕರ್ತ ಅರುಣ್ ಮಂಜುನಾಥ್ ರವರಿಗೆ ಕಾಯಕ ಯೋಗಿ ರಾಜ್ಯ ಪ್ರಶಸ್ತಿ ವಿತರಿಸಿ ಗೌರವಿಸಲಾಗಿದೆ.

ಹಾವೇರಿಯ ಶ್ರೀ ಬಸವಕೇಂದ್ರ,  ಹೊಸಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಜಿಲ್ಲೆಯ ಕವಿಗಳು ಭಾಗವಹಿಸಿದ್ದರು ಹಾಗೂ ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ, ಕನ್ನಡ ಬುಕ್ ಆಫ್ ರೆಕಾರ್ಡ್ಸ್ ನ ವತಿಯಿಂದ ಶರಣ ಶರಣೆಯರ ಕುರಿತಾಗಿ ದಾಖಲೆ ಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಯುವ ಪತ್ರಕರ್ತ ಅರುಣ್ ಮಂಜುನಾಥ್ ರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರುನಾಡ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಸಮ್ಮೇಳನ ಅಧ್ಯಕ್ಷರಾದ ಅಮಜ್ಜವ ಬಾಳೇಶ ಭೋವಿ ಹಾಗೂ ಕಾರ್ಯಕ್ರಮ ದಿವ್ಯ ಸಾನಿಧ್ಯ ಪರಮ ಪೂಜ್ಯ  ಶ್ರೀ ಬಸವಶಾಂತಲಿಂಗ ಸ್ವಾಮಿಜಿ ,   ಸಂಸ್ಥಾಪಕರಾದ ಕನಕ ಪ್ರೀತೀಶ್ , ಮಹಿಳಾ ರಾಜ್ಯಧ್ಯಕ್ಷರಾದ ರೇಖಾ ಶಿವರಾಮ್ ಭಟ್ ಹಾಗೂ  ಕವಿ ಕುಸುಮಗಳು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಭಾಜನರಾದ ಯುವ ಪತ್ರಕರ್ತನಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಅಭಿನಂದನೆಗಳು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.