ನಮ್ಮೂರು ನಮಗೆ ಕಾಶಿ – ನಮ್ಮ ಮನೆಯೇ ಅಯೋಧ್ಯೆ ಆಗಬೇಕು : ಅವಧೂತ ವಿನಯ್ ಗುರೂಜಿ|avadhootha
ರಿಪ್ಪನ್‌ಪೇಟೆ: ಶಾಲೆ ಎಂಬುದು ಅರಿವಿನ ದೇಗುಲ, ಮನುಷ್ಯನಿಗೆ ನಾಗರೀಕತೆ ಬರುವುದು ಶಾಲೆಯಿಂದ. ಸಮಾಜಮುಖಿ ಜ್ಞಾನಾರ್ಜನೆ ಪಡೆದವರು ಕಾಶಿ ಯಾತ್ರೆ ಮಾಡುವ, ರಾಮ ಮಂದಿರ ನಿರ್ಮಿಸುವ ಬದಲು ನಮ್ಮೂರೇ ನಮಗೆ ಕಾಶಿಯಾಗಬೇಕು, ನಮ್ಮ ಮನೆಯನ್ನೇ ರಾಮ ಮಂದಿರ ಅಯೋಧ್ಯೆಯನ್ನಾಗಿ ಪರಿವರ್ತಿಸಬೇಕು ಎಂದು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು. ಸಮೀಪದ ಹೆದ್ದಾರಿಪುರದ ಸಾವಿತ್ರಮ್ಮ ಶ್ರೀರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಶಾಲೆಗಳ ಮುಖ್ಯ ಉದ್ದೇಶವೇ ಮಕ್ಕಳನ್ನು ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ಸಾವಿತ್ರಮ್ಮ…