Headlines

ಗೋಮಾಂಸ ಮಾರುತಿದ್ದ ಯುವಕನ ಮೇಲೆ ಬಜರಂಗದಳ ದಾಳಿ – ಹಲ್ಲೆ : ರಾಜಕೀಯ ಬಣ್ಣ ಪಡೆದುಕೊಂಡ ಪ್ರಕರಣ|assault

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಕಂಚಿ ಬಾಗಿಲಿನಲ್ಲಿ ವ್ಯಕ್ತಿಯೊಬ್ಬ ದನದ ಮಾಂಸವನ್ನು ಮಾರಾಟ ಮಾಡಲು ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಬಜರಂಗ ದಳದ ಯುವಕರು ಆತನಿಗೆ ಅಡ್ಡಗಟ್ಟಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಭದ್ರಾವತಿಯ ಅನ್ವರ್ ಕಾಲೋನಿಯ ಮೂಮಿನ್ ಮೊಹಲ್ಲಾ ವಾಸಿ ಅಬ್ದುಲ್ ರೆಹಮಾನ್ ಬಿನ್ ಮೊಹಮ್ಮದ್ (30) ದನದ ಮಾಂಸದ ವ್ಯಾಪಾರ ಮಾಡುವ ಯುವಕ. ಈತ ಶುಕ್ರವಾರ ಬೆಳಗ್ಗೆ 10 ರಿಂದ 12 ಕೆಜಿಯಷ್ಟು ದನದ ಮಾಂಸದ ಪ್ಯಾಕೆಟ್‌ಗಳನ್ನು ಮಾಡಿಕೊಂಡು ಮನೆ ಮನೆಗೆ ಕೊಡಲು ತನ್ನ ಬೈಕಿನಲ್ಲಿ…

Read More

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನಿಸಿದ್ದ ಪತಿರಾಯ – ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್: ಈ ಸುದ್ದಿ ನೋಡಿ|court

ಮಹಿಳೆಯೋರ್ವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 22 ಸಾವಿರ ರೂ ದಂಡ ವಿಧಿಸಿ‌ದೆ. 2016 ರಲ್ಲಿ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ಶೋಭಾ(26) ಮತ್ತು ಪತಿ ಹಾಲೇಶ್ ನಾಯ್ಕನಿಗೂ ಕೌಟಂಬಿಕ‌ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ 2016 ರಲ್ಲಿ ಶೋಭಾ ತನ್ನ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ನಿಂತಾಗ ಹಾಲೇಶ್ ನಾಯ್ಕ ಹರಿತವಾದ ಆಯುಧದಿಂದ ಆಕೆಯ ತಲೆ ಹಾಗೂ…

Read More

ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ – ಚಕ್ರದಡಿ ಸಿಲುಕಿಕೊಂಡ ಸ್ಕೂಟರ್ : ಸ್ಥಳದಲ್ಲಿಯೇ ಓರ್ವ ಸಾವು|accident

ಶಿವಮೊಗ್ಗ : ಮಲ್ಲಿಗೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ ಬಳಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಸಂಸ್ಥೆಗೆ ಸೇರಿದ ಬಸ್‌ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾದ ರಭಸಕ್ಕೆ ಸ್ಕೂಟರ್‌ ಬಸ್‌ ಚಕ್ರದಡಿ ಸಿಲುಕಿಕೊಂಡಿದ್ದು, ಸಂಪೂರ್ಣ ನುಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತನನ್ನು ಜಾರ್ಖಂಡ್ ಮೂಲದ ಯುವಕ ಅನ್ಸಾರಿ ಎನ್ನಲಾಗುತ್ತಿದೆ.  ಸ್ಥಳಕ್ಕೆ ಸಂಚಾರಿ ಪಶ್ಚಿಮ ಪೊಲೀಸರು ಭೇಟಿ ನೀಡಿದ್ದಾರೆ. ಮೃತ ದೇಹವನ್ನು ಮರಣೋತ್ತರ…

Read More

ಚೋರಡಿ ಬಳಿ ಸರಣಿ ಅಪಘಾತ – ಟ್ರಾಫಿಕ್ ಜಾಮ್|accident

ಶಿವಮೊಗ್ಗ ಜಿಲ್ಲೆಯ ಚೋರಡಿಯಲ್ಲಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತವಾಗಿದ್ದು,ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್‌ ಆದ ಘಟನೆ ನಡೆದಿದೆ. ಖಾಸಗಿ ಬಸ್, ಗೂಡ್ಸ್ ವಾಹನ, ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ವಾಹನಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೆ ವಾಹನದಲ್ಲಿರುವವರಿಗು ಸಮಸ್ಯೆಯಾಗಿಲ್ಲ. ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ…

Read More

ಬಡ ಬಾಲಕನ ಚಿಕಿತ್ಸೆಗೆ ವ್ಯವಸ್ಥೆ – ಮಾನವೀಯತೆ ಮೆರೆದ ಸಂಸದ ಬಿ ವೈ ರಾಘವೇಂದ್ರ|BYR

ಲೋ ಶುಗರ್ ಹಾಗೂ ಗ್ರೋತ್ ಆರ್ಗನ್ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಇಟ್ಟಿಗೆ ಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗೆ ಇಬ್ಬರು ಮಕ್ಕಳು. ಮೊದಲನೆಯವನು ಎಲ್ಲರಂತೆಯೇ ಇದ್ದರೂ ಎರಡನೆಯ ಮಗು ಶ್ರೇಯಸ್‍ಗೆ 6 ತಿಂಗಳಿನಿಂದಲೇ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಲೋ ಶುಗರ್‌ನಿಂದ ಬಳಲುತ್ತಿದ್ದ. ಜೊತೆಗೆ ಗ್ರೋತ್ ಆರ್ಗನ್ ಸಮಸ್ಯೆ ಕೂಡ…

Read More

ರಿಪ್ಪನ್‌ಪೇಟೆ : ಕರ್ಕಶ ಶಬ್ದ ಮಾಡುತಿದ್ದ ಬೈಕ್ ಸೈಲೆನ್ಸರ್ ಗಳನ್ನು ಸೈಲೆಂಟ್ ಮಾಡಿದ ಪೊಲೀಸರು|silencers

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಹಿನ್ನೆಲೆ ಕರ್ಕಶ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರುವ ಬೈಕ್ ಗಳನ್ನು ವಶಪಡಿಸಿಕೊಂಡ ಪೊಲೀಸರು ಸೈಲೆನ್ಸರ್ ಬದಲಾಯಿಸಿ ಭಾರಿ ದಂಡದ ಬಿಸಿ ಮುಟ್ಟಿಸಿದ್ದಾರೆ. ವಾಹನಗಳ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡಿ ಬಳಸುವುದರಿಂದ ವಾಹನಗಳ ಮೈಲೇಜ್ ಕೂಡ ಕಡಿಮೆಯಾಗುತ್ತದೆ. ಆರ್‌ಟಿಒ ನಿಯಮಗಳ ಅನುಸಾರ ಇದು ತಪ್ಪ ಕೂಡ. ಶಬ್ದ ಹೆಚ್ಚು ಬರುವುದರಿಂದ ಶಬ್ದ ಮಾಲಿನ್ಯದ ಜೊತೆಗೆ ವೃದ್ಧರು, ರೋಗಿಗಳಿಗೆ ತೊಂದರೆ ಆಗುತ್ತೆ. ಆದರೂ ಇದರ ಬಳಕೆ ಮಾತ್ರ…

Read More

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಹನೀಯರ ಹೆಸರಿಡಿ – ನನ್ನದು ಕೇವಲ ಅಳಿಲು ಸೇವೆ – ಬಿ ಎಸ್ ಯಡಿಯೂರಪ್ಪ|BSY

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ ಎಂದು ಮತ್ತೊಮ್ಮೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ನಿರಾಕರಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ಬಂದಾಗ, ವಿಮಾನ ನಿಲ್ಧಾಣಕ್ಕೆ ಬಿಎಸ್​ವೈ ಹೆಸರನ್ನು ಇಟ್ಟು ದೆಹಲಿಗೆ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದ್ದರು.  ಇದರ ಬೆನ್ನಲ್ಲೆ ಇದೀಗ ಶಿವಮೊಗ್ಗ ಏರ್‌ಪೋರ್ಟ್‌ಗೆ ತಮ್ಮ ಹೆಸರಿಡದಂತೆ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡಲು ಮಾಡಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹಾಗೂ…

Read More

ಜೂಜಾಟದ ವೇಳೆ ಹಣಕಾಸಿನ ವಿಚಾರದಲ್ಲಿ ಗಲಾಟೆ – ಕೊಲೆಯಲ್ಲಿ ಅಂತ್ಯ|murder

ಭದ್ರಾವತಿ : ಹಣಕಾಸಿನ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆಯ ರಂಗನಾಥಪುರ ಗ್ರಾಮದಲ್ಲಿ ಸಂಭವಿಸಿದ ಈ ಜಗಳದಲ್ಲಿ ವೆಂಕಟೇಶ್‌ ಎಂಬವರ ಕೊಲೆಯಾಗಿದೆ. ರಂಗನಾಥ ಪುರ ಗ್ರಾಮದಲ್ಲಿ ಗಣಪತಿ ಪೆಂಡಾಲ್ ಬಳಿ ಚೌಕಾಬಾರ ಆಡುತ್ತಿದ್ದ ವೇಳೆ ಆಟವನ್ನ ನೋಡುತ್ತಿದ್ದ ವೆಂಕಟೇಶ್ ಗೆ ಅದೇ ಗ್ರಾಮದ ಪ್ರದೀಪ್ ಕಳೆದ 15 ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಗಲಾಟೆ ಪ್ರಾರಂಭಿಸಿದ್ದಾನೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ಶುರುವಾಗಿ ಪ್ರದೀಪ…

Read More

ಫೆ.27 ಕ್ಕೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ – ಯಾವ್ಯಾವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಗೊತ್ತಾ..??? ಈ ಸುದ್ದಿ ನೋಡಿ

ವಿಮಾನ ನಿಲ್ದಾಣ ಲೋಕಾರ್ಪಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ ೨೭ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಗುರುವಾರ ಅಧಿಕಾರಿಗಳ ಪೂರ್ವಸಿದ್ಧತಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿ ೨೭ರಂದು ಪ್ರಧಾನಿ ಅವರು ಶಿವಮೊಗ್ಗ ಆಗಮಿಸುತ್ತಿದ್ದು, ವಿಮಾನ ನಿಲ್ದಾಣ ಲೋಕಾರ್ಪಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವ ಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಪ್ರಧಾನಿ…

Read More

ಗಡಿ ಗುರುತಿಗೆ ಬಂದ ಅರಣ್ಯಾಧಿಕಾರಿಗಳು – ಜಮೀನು ಕಳೆದುಕೊಳ್ಳುವ ಭಯದಲ್ಲಿ ರೈತ ಸಾವು|forest

ಅರಣ್ಯ ಇಲಾಖೆ ಅಧಿಕಾರಿಗಳು ಈಗ ರೈತರ ಸ್ವಾಧೀನದಲ್ಲಿರುವ ಜಾಗದಲ್ಲಿ ಅರಣ್ಯ ಗಡಿ ಗುರುತು ಹಾಕಲು ಬಂದಿದ್ದನ್ನು ನೋಡಿ, ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದ ಮಂಜಪ್ಪ ಎಂಬವರೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟವರು. ಅವರಿಗೆ ಸೇರಿದ ಜಾಗದ ಅರಣ್ಯ ಇಲಾಖೆ ಅಧಿಕಾರಿಗಳು ಗಡಿಗುರುತಿನ ಬಾಂದ್‌ ಕಲ್ಲು ಹಾಕಿದ್ದರಿಂದ ಅವರು ಆತಂಕಿತರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಭೂಮಿ ಸಂರಕ್ಷಣೆಯ ಭಾಗವಾಗಿ ಗಡಿ…

Read More