Headlines

ನಾಳೆ(19-03-2023) ರಿಪ್ಪನ್‌ಪೇಟೆಯಲ್ಲಿ ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ವಾಣಿಜ್ಯ ಗೋದಾಮು ಉದ್ಘಾಟನೆ

ರಿಪ್ಪನ್‌ಪೇಟೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಮಾ.19ರಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ಬಹುಸೇವಾ ವಾಣಿಜ್ಯ ಗೋದಾಮು ಉದ್ಘಾಟನೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಹೊಸನಗರ ತಾಲೂಕು ಶಾಖೆ ವತಿಯಿಂದ ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾಲೂಕ್ ಜಾನಪದ ಪರಿಷತ್ತು ಅಧ್ಯಕ್ಷ ಎಂ.ಎಂ. ಪರಮೇಶ್ ತಿಳಿಸಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿಗೂ ಮತ್ತು…

Read More

ತುಂಗಾ ಸೇತುವೆಯಿಂದ ಹೊಳೆಗೆ ಹಾರಲು‌ ಮುಂದಾದ ಯುವ ಜೋಡಿ – ಯುವತಿ ಬಚಾವ್ ,ಯುವಕ ಗಂಭೀರ|tunga

ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.  ಯುವ ಜೋಡಿಗಳು ಹಳೆಸೇತುವೆ ಬಳಿ ಬಂದು ಕೆಲ ಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್​ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ.  ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ ಮೇಲೆ ಬಿದ್ದಿದ್ದ….

Read More

ಶಿವಮೊಗ್ಗ : ಲೇಡೀಸ್ ನೈಟ್ ಪಾರ್ಟಿ ತಡೆದ ಭಜರಂಗದಳದ ಕಾರ್ಯಕರ್ತರು|Ladies party

ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸಂಜೆ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ‘ಲೇಟ್ ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದ ಘಟನೆ ಶುಕ್ರವಾರ ನಡೆದಿದೆ. ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸಂಜೆ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ‘ಲೇಟ್ ನೈಟ್ ಲೇಡಿಸ್ ಪಾರ್ಟಿ’ಯನ್ನು ಬಜರಂಗದಳದ ಕಾರ್ಯಕರ್ತರು ತಡೆದ ಘಟನೆ ಶುಕ್ರವಾರ ನಡೆದಿದೆ. ಕುವೆಂಪು ರಸ್ತೆಯಲ್ಲಿರುವ ಹೋಟೆಲ್ನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ಭಜರಂಗದಳ ಕಾರ್ಯಕರ್ತರು ಲೇಟ್ ನೈಟ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಕೂಡ ಸ್ಥಳಕ್ಕೆ…

Read More

ರಿಪ್ಪನ್‌ಪೇಟೆ : ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಯಾರು ಇಲ್ಲದ ದೇವಸ್ಥಾನದಲ್ಲಿ ತಾಳಿ ಕಟ್ಟಿದ ಯುವಕ – ಪೋಕ್ಸೋ ಪ್ರಕರಣ ದಾಖಲು|pocso

ರಿಪ್ಪನ್‌ಪೇಟೆ : ಇತ್ತೀಚೆಗೆ ಶಿವಮೊಗ್ಗ ಜಿಲ್ಲಾದ್ಯಂತ ಪೋಕ್ಸೋ ಪ್ರಕರಣಗಳು ಹೆಚ್ಚುತಿದ್ದು ಅದರಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಹಲವಾರು ಪೋಕ್ಸೋ ಪ್ರಕರಣ ದಾಖಲಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ನಂತರ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮದುವೆಯಾದ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ. ನೊಂದ ಬಾಲಕಿಯ ದೂರಿನ ವಿವರ : ನನ್ನ ಊರಿನ ಪರಿಚಯಸ್ಥ ಯುವಕ ಸುಮಾರು ಮೂರ್ನಾಲ್ಕು…

Read More

ಅಪ್ಪು ಜನ್ಮ ದಿನಾಚರಣೆ ಅಂಗವಾಗಿ ಹುಂಚಾದಲ್ಲಿ ಅಭಿಮಾನಿಗಳಿಂದ ಬಿರಿಯಾನಿ ವಿತರಣೆ|ರಿಪ್ಪನ್‌ಪೇಟೆ ಗೇರುಬೀಜ ನೌಕರರಿಂದ ಅಪ್ಪು ಜನ್ಮ ದಿನಾಚರಣೆ|APPU

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದವರಿಂದ ಇಂದು ಸಂಭ್ರಮದೊಂದಿಗೆ ಪುನೀತ್‌ ರಾಜ್‍ಕುಮಾರ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಕೇಕ್ ಕತ್ತರಿಸಿ ಅನ್ನ ಸಂತರ್ಪಣೆ ನಡೆಸುವ ಮೂಲಕ  ಆಚರಿಸಲಾಯಿತು. ಹುಟ್ಟುಹಬ್ಬದ ಅಂಗವಾಗಿ ಹುಂಚ ಗ್ರಾಮದ ಪುನೀತ್ ಕಟ್ಟಾ ಅಭಿಮಾನಿಗಳಾದ ಯದುನಂದನ್ ಹಾಗೂ ನಾಗೇಶ್ ರವರು ತಮ್ಮ ಹೊಟೇಲ್ ಗೆ ಪುನೀತ್ ರಾಜ್ ಕುಮಾರ್ ಹೊಟೇಲ್ ಎಂದು ಕಳೆದ ವರ್ಷ ನಾಮಕರಣ ಮಾಡಿದ್ದರು ಈ ವರ್ಷ ಪುನೀತ್ ಹುಟ್ಟುಹಬ್ಬದ ಅಂಗವಾಗಿ ತಮ್ಮ ಹೊಟೇಲ್ ನಲ್ಲಿ ಕೇಕ್…

Read More

ನಾಗರಹಳ್ಳಿಯಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ|Hospital

ಹೊಸನಗರ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಹಾಗೂ 06 ಲಕ್ಷ ವೆಚ್ಚದ ವ್ಯಾಯಾಮ ಶಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ನಂತರ ಮಾತನಾಡಿದ ಗ್ರಾಪಂ ಸದಸ್ಯ ರಾಘವೇಂದ್ರ ತೋಟದಕಟ್ಟು ಶಿಕ್ಷಣ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಅತ್ಯವಶ್ಯ. ಸಣ್ಣ ಪುಟ್ಟ ಖಾಯಿಲೆಗಳಿಗೆ ತಾಲೂಕ್ ಆಸ್ಪತ್ರೆಯನ್ನು ಅವಲಂಭಿಸಬಾರದು ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ನಮ್ಮ ಸರ್ಕಾರ ಶ್ರಮಿಸಬೇಕಾಗಿದೆ…

Read More

ರಿಪ್ಪನ್‌ಪೇಟೆ : ಕೋಳಿ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ|Raid

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆ ಗ್ರಾಮದ ಆನೆಗದ್ದೆ ಗುಡ್ಡದಲ್ಲಿ ಕೋಳಿ ಅಂಕ ನಡೆಸುತ್ತಿರುವ ಮಾಹಿತಿ ಆಧರಿಸಿ ಪಟ್ಟಣದ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವ ಕುರಿತು ಬಂದ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.ಈ ಸಂದರ್ಭ ಜೂಜಾಟದಲ್ಲಿ ಭಾಗಿಯಾಗಿದ್ದ 10 ರಿಂದ 12  ಆರೋಪಿಗಳು ಪರಾರಿಯಾಗಿದ್ದು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಳಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ…

Read More

ನಾಳೆ (17-03-2023) ಸಾಗರಕ್ಕೆ ವಿಜಯ ಸಂಕಲ್ಪ ಯಾತ್ರೆ – ಹರತಾಳು ಹಾಲಪ್ಪ

ಸಾಗರ: ಮಾ. 17 ರಂದು ವಿಜಯ ಸಂಕಲ್ಪ ಯಾತ್ರೆ ಸಾಗರಕ್ಕೆ ಆಗಮಿಸಲಿದ್ದು ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಸಚಿವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4:30ಕ್ಕೆ ಕಾನ್ವೆಂಟ್ ಶಾಲೆ ಎದುರಿನ ನೆಹರೂ ಮೈದಾನದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಮಾವೇಶದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ,…

Read More

ನಾನು ಗುಳಿಗ ದೈವದ ಬಗ್ಗೆ ಕೀಳಾಗಿ ಮಾತನಾಡಿಲ್ಲ – ಇದೆಲ್ಲಾ ಕಾಂಗ್ರೆಸ್ ಪಕ್ಷದ ಕಪೋಕಲ್ಪಿತ ಕಥೆ : ಆರಗ ಜ್ಞಾನೇಂದ್ರ|ARAGA

ಕರಾವಳಿಯ ಆರಾಧ್ಯ ದೈವ ಗುಳಿಗದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಪಮಾನ ಮಾಡಿದ್ದಾರೆಂಬ ವಿಚಾರದ ಬಗ್ಗೆ ಭಾರೀ ಟೀಕೆ ಎದುರಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿಯಿದೆ. ನಿನ್ನೆ ಕೂಡ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಈ ದೈವದ ಬಗ್ಗೆ ನಂಬಿಕೆಯಿಲ್ಲ, ವಿಶ್ವಾಸ ಇಲ್ಲ, ಮೂಢನಂಬಿಕೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ ನಾಟಕವಾಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಜನರ ಭಾವನೆಗಳನ್ನು ರಾಜಕಾರಣಕ್ಕೆ ಕಾಂಗ್ರೆಸ್…

Read More

ದೈವದ ಬಗ್ಗೆ ಕೀಳಾಗಿ ಮಾತನಾಡಿರುವ ಆರಗ ಜ್ಞಾನೇಂದ್ರರನ್ನು ದೈವವೇ ನೋಡಿಕೊಳ್ಳುತ್ತದೆ – ಕಿಮ್ಮನೆ ರತ್ನಾಕರ್|Kimmane

ಶಿವಮೊಗ್ಗ : ಕರಾವಳಿಯ ದೈವರಾಧನೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಜಾಪಾಳ್ ಮಾತ್ರೆಗೆ ಹೋಲಿಸಿದ್ದು ಇದರ ವಿರುದ್ಧ ಕಿಮ್ಮನೆ ಗರಂ ಆಗಿ ಅವರನ್ನು ದೈವವೇ ನೋಡಿಕೊಳ್ಳಲಿದೆ ಎಂದು ಪ್ರತಿಭಟನೆಯಲ್ಲೇ ಶಾಪ ಹಾಕಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹೊಡೆದಿರುವುದನ್ನ ಖಂಡಿಸಿ ಗುರುವಾರ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಅಲ್ಲಿ ಮಾತನಾಡಿದ ಅವರು ಮೇಲಿನ ಕುರುವಳ್ಳಿಯ ಗ್ರಾಪಂ ನಲ್ಲಿ…

Read More