Headlines

ಅಪ್ಪು ಜನ್ಮ ದಿನಾಚರಣೆ ಅಂಗವಾಗಿ ಹುಂಚಾದಲ್ಲಿ ಅಭಿಮಾನಿಗಳಿಂದ ಬಿರಿಯಾನಿ ವಿತರಣೆ|ರಿಪ್ಪನ್‌ಪೇಟೆ ಗೇರುಬೀಜ ನೌಕರರಿಂದ ಅಪ್ಪು ಜನ್ಮ ದಿನಾಚರಣೆ|APPU

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದವರಿಂದ ಇಂದು ಸಂಭ್ರಮದೊಂದಿಗೆ ಪುನೀತ್‌ ರಾಜ್‍ಕುಮಾರ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಕೇಕ್ ಕತ್ತರಿಸಿ ಅನ್ನ ಸಂತರ್ಪಣೆ ನಡೆಸುವ ಮೂಲಕ  ಆಚರಿಸಲಾಯಿತು.




ಹುಟ್ಟುಹಬ್ಬದ ಅಂಗವಾಗಿ ಹುಂಚ ಗ್ರಾಮದ ಪುನೀತ್ ಕಟ್ಟಾ ಅಭಿಮಾನಿಗಳಾದ ಯದುನಂದನ್ ಹಾಗೂ ನಾಗೇಶ್ ರವರು ತಮ್ಮ ಹೊಟೇಲ್ ಗೆ ಪುನೀತ್ ರಾಜ್ ಕುಮಾರ್ ಹೊಟೇಲ್ ಎಂದು ಕಳೆದ ವರ್ಷ ನಾಮಕರಣ ಮಾಡಿದ್ದರು ಈ ವರ್ಷ ಪುನೀತ್ ಹುಟ್ಟುಹಬ್ಬದ ಅಂಗವಾಗಿ ತಮ್ಮ ಹೊಟೇಲ್ ನಲ್ಲಿ ಕೇಕ್ ಕತ್ತರಿಸಿ ಸುಮಾರು 400 ಜನರಿಗೆ ಉಚಿತವಾಗಿ ಬಿರಿಯಾನಿ ಹಂಚಿ ಸಂಭ್ರಮವನ್ನು ಹಂಚಿಕೊಂಡರು.


ಇದೇ ಸಂಧರ್ಭದಲ್ಲಿ ಅಪ್ಪು ಅಭಿಮಾನಿ ಫೋಟೋಗ್ರಾಫರ್ ಅಭಿಷೇಕ್ ಗೊರನಹಳ್ಳಿ ರವರು ಅಪ್ಪು ಭಾವಚಿತ್ರವನ್ನು ಯದುನಂದನ್ ರವರಿಗೆ ಕೊಡುಗೆಯಾಗಿ ನೀಡಿದರು.




ಈ ಸಂಧರ್ಭದಲ್ಲಿ ಈರನಬೈಲ್ ಸತೀಶ್ , ಯುವರಾಜ್ ,ಗಣೇಶ್ ,ಬೆನಕಪ್ಪ , ಧರ್ಮಪ್ಪ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ರಿಪ್ಪನ್‌ಪೇಟೆ ಗೇರುಬೀಜ ಕಾರ್ಖಾನೆ ಕಾರ್ಮಿಕರಿಂದ ಅಪ್ಪು ಜನ್ಮ ದಿನಾಚರಣೆ 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮದಲ್ಲಿ ಮಹಾಮಾಯೆ ಗೇರುಬೀಜ ಕಾರ್ಖಾನೆ ನೌಕರರು ಮತ್ತು ಚಿತ್ರನಟ ಅಪ್ಪು ಅಭಿಮಾನಿ ಬಳಗದವರಿಂದ ಇಂದು ಸಂಭ್ರಮದೊಂದಿಗೆ ಪುನೀತ್‌ ರಾಜ್‍ಕುಮಾರ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.


ಗೇರುಬೀಜ ಫ್ಯಾಕ್ಟರಿಯಲ್ಲಿ ಕಟ್ಟಾ ಅಪ್ಪು ಅಭಿಮಾನಿ ಪುನೀತ್ ಎಂಬುವರು ಚಿತ್ರನಟ ಪುನೀತ್ ರಾಜ್‌ಕುಮಾರ್‌ರವರ ಭಾವಚಿತ್ರವನ್ನು ಇಟ್ಟು ಹುಟ್ಟುಹಬ್ಬವನ್ನು ಸಿಬ್ಬಂದಿಗಳೊಂದಿಗೆ ಅದ್ದೂರಿಯಾಗಿ ಸಡಗರ ಸಂಭ್ರಮದೊಂದಿಗೆ ಆಚರಿಸಿ ಕೇಕ್ ಕತ್ತರಿಸಿ ಮರೆಯದ ಮಾಣಿಕ್ಯ ಚಿತ್ರನಟ ಪುನೀತ್ ರಾಜ್‍ಕುಮಾರ್ ಬಗ್ಗೆ ಅಭಿಮಾನ ಮೆರೆದರು.




ಮಾಹಾಮಾಯೆ ಗೇರು ಬೀಜ ಫ್ಯಾಕ್ಟರಿಯ ಮಾಲೀಕರಾದ ಡಿ.ನರಸಿಂಹಕಾಮತ್, ಶೈಲಾ ಕಾಮತ್,ನಾಗರಾಜ್, ಕಟ್ಟಾ ಅಭಿಮಾನಿ ಪುನೀತ್,ಉಪೇಂದ್ರಬಾಳಿಗಾ,ರಮೇಶ್ ಪೈ, ಗಿರೀಶ್, ದಿನೇಶ್,ಇನ್ನೂ ಮುಂತಾದ ಗೇರುಬೀಜ ಕಾರ್ಖಾನೆಯ ನೌಕರವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *