Headlines

ರಿಪ್ಪನ್‌ಪೇಟೆ : ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಯಾರು ಇಲ್ಲದ ದೇವಸ್ಥಾನದಲ್ಲಿ ತಾಳಿ ಕಟ್ಟಿದ ಯುವಕ – ಪೋಕ್ಸೋ ಪ್ರಕರಣ ದಾಖಲು|pocso

ರಿಪ್ಪನ್‌ಪೇಟೆ : ಇತ್ತೀಚೆಗೆ ಶಿವಮೊಗ್ಗ ಜಿಲ್ಲಾದ್ಯಂತ ಪೋಕ್ಸೋ ಪ್ರಕರಣಗಳು ಹೆಚ್ಚುತಿದ್ದು ಅದರಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಹಲವಾರು ಪೋಕ್ಸೋ ಪ್ರಕರಣ ದಾಖಲಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ.




ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ನಂತರ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮದುವೆಯಾದ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.

ನೊಂದ ಬಾಲಕಿಯ ದೂರಿನ ವಿವರ :

ನನ್ನ ಊರಿನ ಪರಿಚಯಸ್ಥ ಯುವಕ ಸುಮಾರು ಮೂರ್ನಾಲ್ಕು ವರ್ಷಗಳಿಂದ ನನಗೆ ಪರಿಚಯವಿದ್ದು ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ನನ್ನ ಮನೆಯಲ್ಲಿ ಗೊತ್ತಿರುವುದಿಲ್ಲ.

2022 ರ ಆಗಸ್ಟ್ 22 ನೇ ತಾರೀಖಿನಂದು ಬೆಳಿಗ್ಗೆ ನನ್ನ ಮನೆಯ ಹತ್ತಿರವಿರುವ ಅಂಗನವಾಡಿ ಹಿಂಭಾಗದ ಕಾಡಿನಲ್ಲಿ ಆತ ಮೊದಲ ಬಾರಿಗೆ ಲೈಂಗಿಕ ಸಂಪರ್ಕ ಬೆಳೆಸಲು ಬಂದಾಗ ಆಗ ನನಗೆ ಇನ್ನು 18 ವರ್ಷ ಆಗಿರದೇ ಇದ್ದು, ನಾನು ಇನ್ನೂ ಚಿಕ್ಕವಳು ಲೈಂಗಿಕ ಸಂಪರ್ಕ ಮಾಡುವುದು ಬೇಡವೆಂದರೂ ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಏನು ಆಗುವುದಿಲ್ಲವೆಂದು ಬಲವಂತಪಡಿಸಿ ನನ್ನನ್ನು ಒಪ್ಪಿಸಿ ಲೈಂಗಿಕ ಸಂಪರ್ಕ ಮಾಡಿದ್ದು ನಂತರ ಹಲವು ಬಾರಿ ಭೇಟಿಯಾದಾಗ ಅದೇ ಜಾಗದಲ್ಲಿ ಲೈಂಗಿಕ ಸಂಪರ್ಕ ಹೊಂದಿರುತ್ತಾರೆ.




ನಂತರ ನನ್ನ ದೇಹದಲ್ಲಾದ ಬದಲಾವಣೆಯಿಂದ ಅನುಮಾನಗೊಂಡು ಆತನ ಬಳಿಯೇ ಪ್ರೆಗ್ನೆನ್ಸಿ ಕಿಟ್ ತರಿಸಿಕೊಂಡು ಪರೀಕ್ಷೆ ಮಾಡಿದಾಗ ಗರ್ಭಿಣಿಯಾಗಿರುವ ವಿಚಾರ ತಿಳಿಯಿತು.

ನಂತರ ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರಿಂದ ಮದುವೆಯಾಗಲು ನಿರ್ಧರಿಸಿ ದಿನಾಂಕ: 14‌.03.2023 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನಾನು ಮತ್ತು ಪ್ರಿಯತಮನ ಬೈಕ್ ನಲ್ಲಿ ನನ್ನ ಬಟ್ಟೆ, ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಗಳನ್ನು ತೆಗೆದುಕೊಂಡು ಪ್ರಿಯತಮನ ಸ್ನೇಹಿತನ ಮನೆಗೆ ಹೋಗಿ ರಾತ್ರಿ ಅಲ್ಲೆ ವಾಸವಿದ್ದು, ದಿನಾಂಕ: 15/03/2023 ರಂದು ಸಂಜೆ 4-00 ಗಂಟೆ ಸುಮಾರಿಗೆ ಪ್ರಿಯತಮನ ಮನೆಯ ದೇವರ ಗುಡಿಯ ಮುಂದೆ ಮದುವೆಯಾಗಿರುತ್ತೇವೆ.




ದೇವಸ್ಥಾನದ ಬಾಗಿಲು ಮುಚ್ಚಿದ್ದು ಈ ಸಮಯದಲ್ಲಿ ಯಾರೂ ಇರುವುದಿಲ್ಲ. ಫೋಟೋ ತೆಗೆದಿರುವುದಿಲ್ಲ. ಪ್ರಿಯತಮನ ಸ್ನೇಹಿತನಿಗೂ ಮದುವೆ ವಿಚಾರ ಗೊತ್ತಿದ್ದರೂ ಆತ ಬಂದಿರುವುದಿಲ್ಲ. ನಂತರ ಪ್ರಿಯತಮನ ಸ್ನೇಹಿತನ ಮನೆಗೆ ಮತ್ತೆ ಹೋದೆವು, ಆ ದಿವಸ ಅಲ್ಲಿಯೇ ಉಳಿದುಕೊಂಡು ಮಾರನೆ ದಿನ ದಿನಾಂಕ: 16/03/2023 ರಂದು ಮಧ್ಯಾಹ್ನದ ಸುಮಾರಿಗೆ ನನ್ನ ಪ್ರಿಯತಮ ಸ್ವಿಚ್ ಆಫ್ ಮಾಡಿದ ತನ್ನ ಫೋನನ್ನು ಸ್ವಿಚ್ ಆನ್ ಮಾಡಿದಾಗ ಅವನಿಗೆ ಯಾರೋ ಫೋನ್ ಮಾಡಿ ನಮ್ಮ ಊರಿನ ಅಂಗನವಾಡಿ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಮತ್ತು ಪ್ರಿಯತಮ ಅವನ ಬೈಕಿನಲ್ಲಿ ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ಬಂದಿರುತ್ತೇವೆ. ನಂತರ ಅಲ್ಲಿ ಯಾರೋ ಆಶಾ ಕಾರ್ಯಕರ್ತೆ ಮತ್ತು ಇನ್ನೊಬ್ಬರು ಇದ್ದು, ಅವರು ಯಾರೆಂಬುದು ತಿಳಿದಿರುವುದಿಲ್ಲ ಅವರು ನನ್ನನ್ನು ವಿಚಾರಣೆ ಮಾಡಿ ಕರೆದುಕೊಂಡು ಬಂದು ಸಂಜೆ 6-00 ಗಂಟೆ ಸುಮಾರಿಗೆ ಸುರಭಿ ಕೇಂದ್ರ ಶಿವಮೊಗ್ಗಕ್ಕೆ ಬಿಟ್ಟಿರುತ್ತಾರೆ.

ನಾನು ಅಪ್ರಾಪ್ತೆ ಎಂದು ತಿಳಿದಿದ್ದರೂ ನನ್ನನು ಪುಸಲಾಯಿಸಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೇಂದು ಕೋರಿ ಆಪ್ತ ಸಮಾಲೋಚಕಿ‌ ಮುಂದೆ ನೀಡಿದ ಹೇಳಿಕೆಯಲ್ಲಿ ನೊಂದ ಬಾಲಕಿ ತಿಳಿಸಿದ್ದಾರೆ.




ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಕಲಂ 376(2)(ಎನ್) (ಎಫ್) ಐಪಿಸಿ, ಕಲಂ 6, ಪೋಕ್ಸೊ ಕಾಯ್ದೆ 2012 ಹಾಗೂ ಕಲಂ 09, ಚೈಲ್ಡ್ ಮ್ಯಾರೇಜ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *