Thirthahalli | ಬೈಕ್ ಶೋ ರೂಮ್ ನಲ್ಲಿ ಆಕಸ್ಮಿಕ ಬೆಂಕಿ – ಎರಡು ಬೈಕ್ ಸಂಪೂರ್ಣ ಸುಟ್ಟು ಭಸ್ಮ
ತೀರ್ಥಹಳ್ಳಿ : ಪಟ್ಟಣದ ಆಗುಂಬೆ ಬಸ್ ನಿಲ್ದಾಣದಲ್ಲಿರುವ ಬೈಕ್ ಶೋ ರೂಮ್ ಖಂಡಿಲ್ ಮೋಟಾರ್ಸ್ ಗೆ ಭಾನುವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಹತ್ತಿಕೊಂಡು ಶೋ ರೂಮ್ ಒಳಗಿದ್ದ 20 ಕ್ಕೂ ಹೆಚ್ಚು ಹೊಸ ಬೈಕ್ ಗಳಿಗೆ ಡ್ಯಾಮೇಜ್ ಆಗಿದೆ ಹಾಗೂ ಎರಡು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಶೋ ರೂಮ್ ರಜೆ ಇತ್ತು. ಯುಪಿಎಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಒಳಗಿದ್ದ ಕಂಪ್ಯೂಟರ್, ಕುರ್ಚಿ ಸೇರಿ ಕೋಟ್ಯಾಂತರ ರೂ ಹಾನಿಯಾಗಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.