ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರಾಗಿ ಆದರ್ಶ ಹುಂಚದಕಟ್ಟೆ ಮರು ಆಯ್ಕೆ……
ಸಮಾಜಮುಖಿ ಕೆಲಸಗಳಿಂದ ತನ್ನ ಹೆಜ್ಜೆ ಗುರುತು ಮೂಡಿಸುತ್ತಿರುವ ಕಾಂಗ್ರೆಸ್ ಪಕ್ಷದ ಯುವ ನಾಯಕ ಆದರ್ಶ ಹುಂಚದಕಟ್ಟೆ  ಭಾರತೀಯ ಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಮರು ಆಯ್ಕೆಯಗಿದ್ದಾರೆ. 
ಸದಾ ಹಸನ್ಮುಖಿಯಾಗಿ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಮುನ್ನಡೆಯುತ್ತಿರುವ ಯುವ ನಾಯಕನಿಗೆ ಈ ಹುದ್ದೆ ಇನ್ನಷ್ಟೂ ಜವಬ್ದಾರಿ ಹೆಚ್ಚಿಸಿದೆ. ಕರ್ನಾಟಕದಿಂದ ಈ ಬಾರಿ ಆಯ್ಕೆಯಾಗಿರುವ ಏಕಮಾತ್ರ ಹೆಸರಾಗಿದ್ದು ರಾಜ್ಯದ್ಯಾಂತ ಸುತ್ತಿ ಯುವ ಜನತೆಯಲ್ಲಿ ಪಕ್ಷದ ಸಿದ್ದಾಂತ , ಕಾರ್ಯಕ್ರಮಗಳನ್ನು ಮನದಟ್ಟು ಮಾಡಿಸುವ ಜವಬ್ಧಾರಿ ಇದೆ. 
ಕೋವಿಡ್ ಸಮಯದಲ್ಲಿ ತನ್ನದೇ ತಂಡ ಕಟ್ಟಿಕೊಂಡು ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ಜನರ ಸಂಕಷ್ಟಕ್ಕೆ ಮಿಡಿದಿದ್ದು ಇವರ ಸಮಾಜಮುಖಿ ಕೆಲಸಗಳಿಗೆ ಸಾಕ್ಷಿಯಾಗಿತ್ತು. ಇದೇ ಸಮಾಜಮುಖಿ ಕೆಲಸಗಳು ಇವರನ್ನು ಕಾಂಗ್ರೆಸ್ ಪಕ್ಷದ ಯುವ ನಾಯಕತ್ವಕ್ಕೆ ರಹದಾರಿಯಗಿ ಪರಿಣಮಿಸಿತು. ಕಳೆದ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಗೆಲುವಿಗೆ ಸತತ ಹೋರಾಟ ನಡೆಸಿದರು ಚುನಾವಣೆಯ ಸೋಲು ಸ್ವಲ್ಪ ಹಿನ್ನಡೆ ಮೂಡಿಸಿತ್ತು.
 ಈಗ ಎಲ್ಲಾ ಹಿರಿಯರನ್ನು ಒಟ್ಟಗೂಡಿಸಿಕೊಂಡು ,ಯುವ ಪಡೆಯನ್ನು ಮುನ್ನಡೆಸುತ್ತಿರುವ ಆದರ್ಶ ಹುಂಚದಕಟ್ಟೆ ಕಿಮ್ಮನೆ ರತ್ನಾಕರ್ , ಅರ್ ಎಮ್ ಮಂಜುನಾಥಗೌಡರ ನಂತರ ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದ ಭವಿಷ್ಯವಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ.
 
                         
                         
                         
                         
                         
                         
                         
                         
                         
                        
