ಪಟಾಕಿ ಸಿಡಿದು ಯುವಕ ಸಾವು – ಮೂವರು ಆಸ್ಪತ್ರೆಗೆ ದಾಖಲು|
Fire work disaster | ಪಟಾಕಿ ಸಿಡಿದು ಓರ್ವ ಯುವಕನೊಬ್ಬ ಸಾವನ್ನಪ್ಪಿ, ಮೂವರು ಮಕ್ಕಳಿಗೆ ಗಂಭೀರ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಮತ್ತು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ತರೀಕೆರೆ ತಾಲೂಕಿನ ಸುಣ್ಣದ ಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿದವನನ್ನು ಪ್ರದೀಪ್ (30) ಎಂದು ಗುರುತಿಸಲಾಗಿದೆ.
ನಡೆದಿದ್ದೇನು..??
ಮಂಗಳವಾರ ರಾತ್ರಿ ಪ್ರದೀಪ್ ಕುರ್ಚಿಯ ಕೆಳಗೆ ಪಟಾಕಿ ಇಟ್ಟುಕೊಂಡಿದ್ದ ವೇಳೆಯಲ್ಲಿ ಪಕ್ಕದಲ್ಲಿ ಸಿಡಿದ ಪಟಾಕಿಯ ಕಿಡಿ ಹಾರಿ ಬಂದು ಚೇರ್ ಕೆಳಗಿನ ಪಟಾಕಿ ಸಿಡಿಯುವಂತಾಗಿ ಈ ಅವಘಡ ಸಂಭವಿಸಿದೆ.ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಯುವಕ ಮೇಲಕ್ಕೆ ಹಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ರಾತ್ರಿ ಘಟನೆ ನಡೆದಿದೆ. ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇಟ್ಟುಕೊಂಡು ಕೂತಿದ್ದ ಯುವಕ ಪಟಾಕಿ ಸಿಡಿಯುತ್ತಿದ್ದಂತೆ ಮೇಲೆ ಹಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ.
ಯುವಕನ ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರವಾದ ಹೊಡೆತ ಬಿದ್ದ ಪರಿಣಾಮ ಪ್ರದೀಪ್ ಸಾವು ಕಂಡಿದ್ದಾನೆ. ಮೂವರು ಮಕ್ಕಳಿಗೂ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಲು ಆಟಂಬಾಂಬ್ ಪಟಾಕಿ ಸಿಡಿದ ರಭಸಕ್ಕೆ ಮನೆಯ ಗ್ಲಾಸ್ ಗಳು ಪುಡಿ-ಪುಡಿ ಆಗಿವೆ. ಪಟಾಕಿ ಸಿಡಿಸುವದನ್ನು ನೋಡುತಿದ್ದ 12 ವರ್ಷದ ಬಾಲಕ, ಈತನ ಜೊತೆಗೆ ಇದ್ದ 14 ವರ್ಷದ ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.15 ವರ್ಷದ ಮತ್ತೋರ್ವ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


