w
Headlines
Home » ಶಿವಮೊಗ್ಗ ಮೂಲದ ಪಿಎಸ್ಐ ಅಕಾಲಿಕ ನಿಧನ.!!|psi

ಶಿವಮೊಗ್ಗ ಮೂಲದ ಪಿಎಸ್ಐ ಅಕಾಲಿಕ ನಿಧನ.!!|psi

ಶಿವಮೊಗ್ಗ ಮೂಲದ ಪಿಎಸ್ಐ ಅಕಾಲಿಕ ನಿಧನ.!!
ಶಿವಮೊಗ್ಗ ತಾಲೂಕಿನ ಮೂಲದ ನಳಿನಕೊಪ್ಪ ಗ್ರಾಮದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಗದೀಶ್ ನಾಯ್ಕ್ ಪ್ರಸ್ತುತ  ಔರಾದ್ ಸ್ಟೇಷನ್ 2nd ಗಾಂಧಿ ಗಂಜ್ ಪೊಲೀಸ್ ಠಾಣೆ ಪಿಎಸ್ಐ ಆಗಿ ಬೀದರ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು..

ತಂದೆ ಈರ ನಾಯ್ಕ, ತಾಯಿ ಸಾವಿತ್ರಿ ಬಾಯಿ,ಒಬ್ಬ ಸಹೋದರ ಸಹ ಸಿವಿಲ್ ಪೊಲೀಸ್ ಸಹ ಸೇವೆ ಸಲ್ಲಿಸುತ್ತಿದ್ದಾರೆ.!ಮೃತರು ಇಬ್ಬರು ಸಹೋದರಿಯನ್ನ ಹೊಂದಿದ್ದಾರೆ ಸಹೋದರರು ಇಬ್ಬರೂ ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಿಶೇಷವಾಗಿದ್ದು,ಮಗನ ಅಕಾಲಿಕ ಮರಣಕ್ಕೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಾಥಮಿಕ ಶಿಕ್ಷಣವನ್ನ ಶಿಕಾರಿಪುರ ನಲ್ಲಿನಕೊಪ್ಪದಲ್ಲಿ ಪೂರ್ಣ ಗೊಳಿಸಿದ್ದು
ಪ್ರೌಢ ಶಾಲೆ ವಿದ್ಯಾಭ್ಯಾಸವನ್ನ ಹೊಸೂರು ಶಿಕಾರಿಪುರದಲ್ಲಿ ಮುಗಿಸಿದ್ದು ಪದವಿಯನ್ನ ದೂರ ಶಿಕ್ಷಣ ಮೂಲಕ ಹಾಗೂ ಪದವಿ ಪೂರ್ವ ಶಿಕ್ಷಣವನ್ನ ಶಿಕಾರಪುರ ಸಿಟಿಯ ಜೂನಿಯರ್ ಕಾಲೇಜು ನಲ್ಲಿ  ಪೂರ್ಣ ಗೊಳಿಸಿದ್ದಾರೆ..

ಹಠತ್ ಇವರಿಗೆ ಕ್ಯಾನ್ಸರ್ ಮಹಾಮಾರಿ ಇವರನ್ನ ಅವರಿಸಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ..

2017 ರ ಬ್ಯಾಚ್ ನ ಪಿಎಸ್ಐ ಆಗಿ ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿದ ಜಗದೀಶ್ ನಾಯ್ಕ 2009 ಪೊಲೀಸ್ ಪೇದೆಯಾಗಿ ಮಂಗಳೂರು ನಗರ 2015 ರಲ್ಲಿ RSI ಆಗಿ ಬೆಂಗಳೂರು ನಗರ,2018 ಪಿಎಸ್ಐ ಸಿವಿಲ್ ಆಗಿ ಬೀದರ್ ಜಿಲ್ಲೆಯ ಔರಾದ್ ನಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರು..

 ಕಳೆದ 2ವರ್ಷದ ಹಿಂದೆ ಶಿವಮೊಗ್ಗದ ಹೊಸಕೊಪ್ಪ  ಸಮೀಪದ ಯುವತಿಯನ್ನ ಮದುವೆ ಸಹ ಆಗಿದ್ದರು..

ಜಗದೀಶ್ ನಾಯ್ಕ ಅವರ ಅಂತ್ಯಕ್ರಿಯೆ  ನಾಳೆ ಬೆಳಿಗ್ಗೆ ಸ್ವ ಗ್ರಾಮ ನಲ್ಲಿನಕೊಪ್ಪ ದಲ್ಲಿ,ಸಕಲ ಸರ್ಕಾರಿ ಗೌರವ ಗಳೊಂದಿಗೆ ನೆರವೇರಲಿದ್ದು ಇಡೀ ಶಿವಮೊಗ್ಗ ಪೊಲೀಸ್ ಇಲಾಖೆ ಸ್ನೇಹಿತರು, ಕುತುಂಬಸ್ತರು ಜಗದೀಶ್ ನಾಯಕರ ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ..


ಮಾಹಿತಿ :ಅಜಿತ್ ಗೌಡ ಬಡೇನಕೊಪ್ಪ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.