Headlines

ಸಂಸದ ಬಿ ವೈ ರಾಘವೇಂದ್ರ ಮನೆಯ ರಸ್ತೆಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆ – ವಾಮಾಚಾರದ ಶಂಕೆ!!!|black magic

ಸಂಸದ ಬಿ ವೈ ರಾಘವೇಂದ್ರ ಮನೆಯ ರಸ್ತೆಯಲ್ಲಿ ಪುನುಗು ಬೆಕ್ಕಿನ ದೇಹ ಪತ್ತೆ – ವಾಮಾಚಾರದ ಶಂಕೆ!!! ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮತ್ತೆ ವಾಮಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ಅವಧಿಯಲ್ಲಿ ಶಿಕಾರಿಪುರದಲ್ಲಿ ವಾಮಾಚಾರದ ಸದ್ದು ಭಾರೀ ಕೇಳಿ ಬಂದಿತ್ತು.  ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸಂಸದ ಬಿವೈ ರಾಘವೇಂದ್ರರವರ ತೋಟದಲ್ಲಿ ಪುನಗು ಬೆಕ್ಕೊಂದು ಕೊಂದು ಹೂತು ಹಾಕಿ ವಾಮಾಚಾರ ಪ್ರಯೋಗ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೀಗ ಬಿವೈ ರಾಘವೇಂದ್ರ…

Read More

ಶಿವಮೊಗ್ಗ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕರಾಗಿ ಬಿ ಟಿ ಹಾಲೇಶ್ ಅಧಿಕಾರ ಸ್ವೀಕಾರ|district news

ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರನ್ನಾಗಿ ಬಿ ಟಿ ಹಾಲೇಶ್ ರವರನ್ನು ವರ್ಗಾವಣೆಗೊಳಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಮೂಲತಃ ಭದ್ರಾವತಿಯ ಬಿ ಟಿ ಹಾಲೇಶ್  ಸಾಗರ ವಿಭಾಗೀಯ ಕಚೇರಿಯಲ್ಲಿ ಕೆಲವು ವರ್ಷಗಳ ಕಾಲ ಸೇವೆ ಮಾಡಿರುತ್ತಾರೆ.ನಂತರ ಹಾಸನ ಜಿಲ್ಲೆಗೆ ಪದೋನ್ನತಿ ಹೊಂದಿ ಅಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಸದರಿ ಶಿವಮೊಗ್ಗ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾಗಿ…

Read More

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್ ​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು|FIR

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ…

Read More

ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕಡಿದು ಕೊಂದ ಕ್ರೂರಿ ಮಗ|crime news

ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕಡಿದು ಕೊಂದ ಕ್ರೂರಿ ಮಗ ಹೆತ್ತು ಹೊತ್ತ ತಾಯಿಯನ್ನು ಮಗನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಭೀಬತ್ಸಕರ ಘಟನೆ ಮಲೆನಾಡಿನಲ್ಲಿ ನಡೆದಿದೆ. ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದ ಘೋರ ಹತ್ಯೆಯೊಂದರ ಕಥೆ. ಇಲ್ಲಿನ ಮಾವಿನಕೆರೆ ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದು ಹಾಕಿದ್ದಾನೆ.  ತಾಯಿಯನ್ನೆ ಕೊಂದ ಕ್ರೂರಿ ಮಗ ಸಂತೋಷ (49) ಆತ ಭಾನುವಾರ ರಾತ್ರಿಯೇ ಕೊಲೆ ಮಾಡಿರುವ ಶಂಕೆ ಇದ್ದು, ಸೋಮವಾರ…

Read More

ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಕಾರ್ಮಿಕರು ಆರ್ಥಿಕವಾಗಿ ಸದೃಢರಾಗಬೇಕು – ಬೇಳೂರು ಗೋಪಾಲಕೃಷ್ಣ|Rpet news

ರಿಪ್ಪನ್‌ಪೇಟೆ : ಸರಕಾರ ಕಟ್ಟಡ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗವ ಪಡೆದುಕೊಂಡು ಕಾರ್ಮಿಕರು ಆರ್ಥಿಕವಾಗಿ ಸದೃಡವಾಗಬೇಕು ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಜಿಎಸ್ ಬಿ ಕಲ್ಯಾಣ ಮಂದಿರದಲ್ಲಿ ಹೊಸನಗರ ತಾಲೂಕು ಗ್ರಾಮಾಂತರ ವ್ಯಾಪ್ತಿಯ ಕಟ್ಟಡ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಆಯ್ಕೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿ ಸರ್ಕಾರದ ಯೋಜನೆಯನ್ನು ಫಲಾನುಭವಿಗಳಿಗೆ ನೇರವಾಗಿ ದೊರೆಯುವಂತಹ ಕಾರ್ಯಕ್ರಮವನ್ನು ಸಂಘಟನೆಗಳು ಹಮ್ಮಿಕೊಳ್ಳಬೇಕು ಎಂದರು. ಕಾರ್ಮಿಕ…

Read More

ಸಾಗರದಲ್ಲಿ ರೌಡಿಗಳ ಪರೇಡ್|sagara

ಸಾಗರದಲ್ಲಿ ರೌಡಿಗಳ ಪರೇಡ್|sagara ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್​ ಸಾಗರ ಉಪವಿಭಾಗದ ವ್ಯಾಪ್ತಿ ರೌಡಿ ಪರೇಡ್ ನಡೆಸಿದ್ಧಾರೆ.  ಸಾಗರ ಟೌನ್​ ಪೊಲೀಸ್ ಸ್ಟೇಷನ್​ ಎದುರು ಪರೇಡ್ ನಡೆಸಿದ ಅವರು ರೌಡಿಸಂ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿ ಮಾತನಾಡಿದ ಅವರು, ನಿಮ್ಮ ಹೆಂಡತಿ ಮಕ್ಕಳ ಜೊತೆ ಉತ್ತವiವಾಗಿ ಸಂಸಾರಮಾಡಿಕೊಂಡು ಹೋಗಿ. ಇಲಾಖೆಯಿಂದ ನಿಮಗೆ ಯಾವುದೇ ತೊಂದರೆ ಬರುವುದಿಲ್ಲ. ಒಂದೊಮ್ಮೆ ನಿಮ್ಮ ಹಳೆ ಚಾಳಿಯನ್ನು ಪುನರಾರಂಭಿಸಿದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.  ಮಾದಕ ವಸ್ತು…

Read More

ನಾಳೆ (28-07-2023) ರಿಪ್ಪನ್‌ಪೇಟೆಯಲ್ಲಿ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟನೆ

ನಾಳೆ (28-07-2023) ರಿಪ್ಪನ್‌ಪೇಟೆಯಲ್ಲಿ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟನೆ  ರಿಪ್ಪನ್‌ಪೇಟೆ : ‌ಆಗಸ್ಟ್ 28ರ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ರಿಪ್ಪನ್‌ಪೇಟೆ ಘಟಕ ಉದ್ಘಾಟನೆ ಹಾಗೂ ಉಚಿತ ಸಂಚಾರಿ ಚಿಕಿತ್ಸಾಲಯದ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹಾಗೂ ಹೊಸನಗರ ಗ್ರಾಮಾಂತರ ಅಧ್ಯಕ್ಷ ಮಹಮ್ಮದ್ ಹುಸೇನ್ ಜಂಟಿ ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ‌. ಪಟ್ಟಣದ ಗ್ರಾಮ ಪಂಚಾಯಿತಿ ಕುವೆಂಪು ಸಭಾ ಭವನದಲ್ಲಿ ಪತ್ರೀಕಾಗೋಷ್ಟಿಯನ್ನುದೇಶಿಸಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ…

Read More

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಆರೋಪಿಗಳು ಪರಾರಿ ,ಜಾನುವಾರು ರಕ್ಷಣೆ|crime news

ರಿಪ್ಪನ್‌ಪೇಟೆ : ಅಕ್ರಮ ಗೋ ಸಾಗಾಟ – ಆರೋಪಿಗಳು ಪರಾರಿ ,ಜಾನುವಾರು ರಕ್ಷಣೆ ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನ ಬೆಳಕೋಡು ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ನಡೆಸುತಿದ್ದ ವಾಹನ ಸಮೇತ ಜಾನುವಾರನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೆಳಕೋಡು ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತಿದ್ದ ಅಶೋಕ್ ಲೈಲ್ಯಾಂಡ್ ಲಗೇಜ್ ಆಟೋವನ್ನು ಅನುಮಾನದಿಂದ ಸ್ಥಳೀಯರು ತಡೆದು ವಿಚಾರಿಸಲು ಹೋದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿತ್ತು. ಅಶೋಕ್ ಲೈಲ್ಯಾಂಡ್ ಲಗೇಜ್ ಆಟೋ(ka-15-9389)…

Read More

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಅದಿರು ತುಂಬಿದ ಲಾರಿ|accident

ಚಾಲಕನ ನಿಯಂತ್ರಣ ತಪ್ಪಿ ಅದಿರು ತುಂಬಿದ ಲಾರಿಯೊದು ಮರಕ್ಕೆ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಿಡಿಹಳ್ಳ ಸೇತುವೆ ಸಮೀಪದಲ್ಲಿ ನಡೆದಿದೆ. ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆಗೆ ಬರುತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಿಡಿಹಳ್ಳ ಸಮೀಪದಲ್ಲಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ನಿದ್ರೆಯ ಮಂಪರಿನಿಂದ ಅಪಘಾತವಾಗಿರಬಹುದು ಎನ್ನಲಾಗುತ್ತಿದೆ. ಅಪಘಾತದ ರಭಸಕ್ಕೆ ಲಾರಿ ಸಂಪೂ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಅನಾರೋಗ್ಯ ಸಮಸ್ಯೆಯಿಂದ ಮನನೊಂದು ದಿನಗೂಲಿ ನೌಕರ ಆತ್ಮಹತ್ಯೆಗೆ ಶರಣು|crime news

ಅನಾರೋಗ್ಯ ಸಮಸ್ಯೆಯಿಂದ ಮನನೊಂದು ದಿನಗೂಲಿ ನೌಕರ ಆತ್ಮಹತ್ಯೆಗೆ ಶರಣು ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಆರೋಗ್ಯ ಸಮಸ್ಯೆಯಿಂದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.  ಚಂದ್ರಗುತ್ತಿ ಗ್ರಾಮದ ಗಣಪತಿ ತಾವರೆಹಳ್ಳಿ (40) ಮೃತ ನೌಕರ. ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ‌ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ ಅವರು ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.  ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ…

Read More