ರಿಪ್ಪನ್ಪೇಟೆ : ಇಲ್ಲಿನ ಅರಸಾಳಿನ ರೈಲು ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲು ನಿಲುಗಡೆಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದ್ದು ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ರೈಲ್ವೆ ಇಲಾಖೆ 2 ತಿಂಗಳು ಪ್ರಾಯೋಗಿಕವಾಗಿವಾಗಿ ಈ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಆದೇಶ ನೀಡಿದ್ದು ಈ ಪ್ರಾಯೋಗಿಕ ಸಮಯದಲ್ಲಿ ಈ ನಿಲ್ದಾಣದಲ್ಲಿ ಪ್ರಯಾಣಿಸುವ ಜನಸಾಂದ್ರತೆ ಹೆಚ್ಚಿದ್ದಲ್ಲಿ ಮಾತ್ರ ರೈಲು ನಿಲುಗಡೆಯನ್ನು ಮುಂದುವರಿಸಲಾಗುವುದು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ತಾಳಗುಪ್ಪ – ಬೆಂಗಳೂರು – ಮೈಸೂರು ಇಂಟರ್ ಸಿಟಿ ರೈಲು
ಅರಸಾಳು ನಿಲ್ದಾಣಕ್ಕೆ 10.00 ಕ್ಕೆ ಬರಲಿದ್ದು ಬೆಂಗಳೂರಿಗೆ 5.10 ಕ್ಕೆ ಹಾಗೂ 8.10 ಕ್ಕೆ ಮೈಸೂರಿಗೆ ತೆರಳಲಿದೆ.
ರಾತ್ರಿ 7.30 ಮೈಸೂರು ಬಿಡುವ ಇಂಟರ್ ಸಿಟಿ ರೈಲು ಬೆಂಗಳೂರಿಗೆ ರಾತ್ರಿ 11ಕ್ಕೆ ಬರಲಿದ್ದು ಅರಸಾಳು ರೈಲು ನಿಲ್ದಾಣಕ್ಕೆ 5.40 ಬರಲಿದೆ.
ಒಟ್ಟಾರೆಯಾಗಿ ರೈಲು ನಿಲುಗಡೆ ಶಾಶ್ವತವಾಗಿ ಮುಂದುವರೆಯಬೇಕಾದಲ್ಲಿ ಪ್ರಯಾಣಿಕರು ಈ ನಿಲ್ದಾಣದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಸಂಚರಿಸಬೇಕಾಗಿದೆ.
ಅರಸಾಳಿನ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೊಳಿಸುವಂತೆ ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಹಲವಾರು ವರದಿಗಳನ್ನು ಬಿತ್ತರಿಸಲಾಗಿತ್ತು ಹಾಗೂ ಅನೇಕ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು, ಹೋರಾಟಗಾರರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.ಮಾಜಿ ಶಾಸಕ ಹರತಾಳು ಹಾಲಪ್ಪ ರವರ ನೇತೃತ್ವದಲ್ಲಿ ಸಂಸದ ಬಿ ವೈ  ರಾಘವೇಂದ್ರ ರವರೊಂದಿಗೆ ರೈಲ್ವೆ ಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸದ್ದನ್ನು ಸ್ಮರಿಸಬಹುದಾಗಿದೆ.
ರೈಲು ನಿಲುಗಡೆಗೆ ಶ್ರಮಿಸಿದ ಸಂಸದ ಬಿ ವೈ ರಾಘವೇಂದ್ರ ರವರಿಗೆ ಗ್ರಾಮಸ್ಥರು ,ಸಂಘ ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
 
                         
                         
                         
                         
                         
                         
                         
                         
                         
                        

