ಮತ್ತು ಬರುವ ಔಷಧಿ ನೀಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ..
ಶಿವಮೊಗ್ಗ : ಕೆಲವು ತಿಂಗಳ ಹಿಂದೆ ನಗರದಲ್ಲಿ ನಡೆದಂತಹ ಪೋಕ್ಸೋ ಪ್ರಕರಣವನ್ನೇ ಜನರು ಇನ್ನೂ ಮರೆತಿಲ್ಲ ಅದರ ಬೆನ್ನಲ್ಲೇ ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮತ್ತೊಂದು ಪೋಕ್ರೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಗೆ ಮತ್ತು ಬರುವ ಔಷಧಿ ನೀಡಿ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಗರದ ಅಜಯ್ (32) ಹಾಗೂ ಶಾಬಾದ್ (26) ಎನ್ನುವವರು ಪರಿಚಿತ ಬಾಲಕಿಯನ್ನು ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ ಈ ವೇಳೆ ಬಾಲಕಿಗೆ ಮತ್ತು ಬರುವ ಔಷಧಿಯನ್ನು ನೀಡಿ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದಾರೆ.
ಅರೋಪಿ ಯುವಕರ ವಿರುದ್ಧ ಪೋಕ್ಸೋ ಹಾಗೂ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಅಪ್ರಾಪ್ತೆಯ ಜೊತೆ ಸಂಪರ್ಕದಲ್ಲಿದ್ದ ಇವರು ಆಗಸ್ಟ್ 19ರಂದು ಪ್ರವಾಸದ ನೆಪದಲ್ಲಿ ಕರೆದಿದ್ದಾರೆ. ನಾವಿದ್ದೇವೆ ಹೋಗಿ ಬರೋಣ ಎಂದು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ. ಪರಿಚಿತರೆಂಬ ನೆಲೆಯಲ್ಲಿ ಆಕೆಯೂ ಅವರ ಜತೆ ಬಂದಿದ್ದಾಳೆ.
ಶನಿವಾರ ಶಿವಮೊಗ್ಗದಲ್ಲಿ ಅಲ್ಲಿಲ್ಲಿ ಸುತ್ತಾಡಿಸಿದ ಇವರು ಬಳಿಕ ಆಕೆಯನ್ನು ಕರೆದುಕೊಂಡು ಸುರಕ್ಷಿತ ಜಾಗವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಮತ್ತು ಬರುವ ಔಷಧ ನೀಡಿದ್ದಾರೆ. ಆಕೆ ಮತ್ತಿಗೆ ಜಾರುತ್ತಿದ್ದಂತೆಯೇ ಇವರು ಮೊದಲೇ ನಿರ್ಧಾರ ಮಾಡಿದಂತೆ ಸರದಿಯಂತೆ ಆಕೆಯ ಮೇಲೆ ಎರಗಿದ್ದಾಳೆ. ಅರೆ ಮಂಪರಿನಲ್ಲಿದ್ದ ಆಕೆ ನೋವನ್ನು ಹೇಗೋ ಸಹಿಸಿಕೊಂಡಿದ್ದಾಳೆ.
ಸ್ವಲ್ಪ ಹೊತ್ತಿನ ಬಳಿಕ ಅರೆ ಎಚ್ಚರವಾದ ಬಳಿಕ ಆಕೆ ಎದ್ದು ನೋಡಿದರೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದಿದೆ. ಆಕೆ ಕಣ್ಣೀರು ಹಾಕಿ ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದ್ದಾಳೆ ಎನ್ನಲಾಗಿದೆ. ಈ ನಡುವೆ ಹುಡುಗರೇ ಆಕೆಯನ್ನು ಸಾಗರಕ್ಕೆ ಮರಳಿ ತಂದು ಬಿಟ್ಟಿದ್ದಾರೆ. ಆದರೆ, ಯಾವ ಕಾರಣಕ್ಕು ವಿಷಯವನ್ನು ಮನೆಯಲ್ಲಿ ತಿಳಿಸಬಾರದು, ತಿಳಿಸಿದರೆ ನಿನಗೇ ತೊಂದರೆ ಎಂದು ಹೆದರಿಸಿದ್ದಾರೆ.
ನೋವಿನಿಂದಲೇ ಮನೆಗೆ ಬಂದ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದರೆ ತನ್ನದೇ ತಪ್ಪಾಗುತ್ತದೆ, ಅವರ ಜತೆಗೆ ಹೋಗಿದ್ದು ಯಾಕೆ ಎಂದು ಕೇಳುತ್ತಾರೆ ಎಂದು ಭಯಗೊಂಡಿದ್ದಳು. ಆದರೆ ಮನೆಯಲ್ಲಿ ಆಕೆಯ ಚಲನವಲನ, ಆಕೆ ಅನುಭವಿಸುತ್ತಿರುವ ನೋವು ಕಂಡು ವಿಚಾರಿಸಿದಾಗ ಸತ್ಯ ಹೊರಗೆ ಬಂದಿದೆ.
ಈ ಘಟನೆ ಆಗಸ್ಟ್ 19 ರಂದು ನಡೆದಿದ್ದು, ನಿನ್ನೆ ಸಂಜೆ ಸಾಗರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.