w
Headlines
Home » ರಿಪ್ಪನ್‌ಪೇಟೆ : ಬಾಳೂರು ತಿರುವಿನಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಗಾಯಾಳುಗಳು ಮೆಗ್ಗಾನ್ ಗೆ ರವಾನೆ|accident

ರಿಪ್ಪನ್‌ಪೇಟೆ : ಬಾಳೂರು ತಿರುವಿನಲ್ಲಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಗಾಯಾಳುಗಳು ಮೆಗ್ಗಾನ್ ಗೆ ರವಾನೆ|accident

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮದ ಹರತಾಳು ತಿರುವಿನಲ್ಲಿ ನಡೆದಿದೆ.

ರಿಪ್ಪನ್‌ಪೇಟೆಯಿಂದ ಗೇರುಬೀಸು ಕಡೆ ತೆರಳುತಿದ್ದ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಹಾಗೂ ಬಾಳೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತಿದ್ದ ಬಜಾಜ್ ಡಿಸ್ಕವರ್ ಬೈಕ್ ನಡುವೆ ಬಾಳೂರು ತಿರುವಿನ ಬಳಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ.

ಈ ಅಪಘಾತದಲ್ಲಿ ಗೇರುಬೀಸು ನಿವಾಸಿ ಮೋಹನ್(22) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಮತ್ತೊಂದು ಬೈಕ್ ನಲ್ಲಿದ್ದ ಶುಂಠಿ ಕೆಲಸಕ್ಕೆ ಬಂದಿದ್ದ ಹಾವೇರಿ ಮೂಲದ ಸಂಜೀವ್(23) ಎಂಬಾತನಿಗೂ ಪೆಟ್ಟಾಗಿದೆ.

ಗಾಯಾಳು ಮೋಹನ್ ನನ್ನು ರಿಪ್ಪನ್‌ಪೇಟೆಯ ನಂದಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿ ಮತ್ತೊಬ್ಬ ಗಾಯಾಳು ಸಂಜೀವ್ ನನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.