w
Headlines
Home » ಈಜಲು ತೆರಳಿದ್ದ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲು – ಓರ್ವನ ಶವ ಪತ್ತೆ|tunga

ಈಜಲು ತೆರಳಿದ್ದ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲು – ಓರ್ವನ ಶವ ಪತ್ತೆ|tunga

ತೀರ್ಥಹಳ್ಳಿ : ಇಲ್ಲಿನ ತೀರ್ಥಮತ್ತೂರಿನಲ್ಲಿ ಈಜಲು ಇಳಿದ ಇಬ್ಬರು ಪ್ರಾಧ್ಯಾಪಕರು ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ.

ತೀರ್ಥಮತ್ತೂರು ಬಳಿ 8-10 ಜನ ಪ್ರಾಧ್ಯಾಪಕರು ತುಂಗ ನದಿಗೆ ಇಳಿದಾಗ ಓರ್ವ ಪ್ರಾಧ್ಯಾಪಕರು ನೀರು ಪಾಲಾಗಿದ್ದು ಅವರನ್ನು ರಕ್ಷಿಸಲು ಮತ್ತೋರ್ವ ಪ್ರಾಧ್ಯಾಪಕರು ಮುಂದಾಗಿದ್ದು ಅವರೂ ಸಹ ನೀರು ಪಾಲಾಗಿದ್ದಾರೆ.

ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್ ಮತ್ತು ಬಾಲಾಜಿ ನೀರುಪಾಲಾದ ದುರ್ಧೈವಿಗಳಾಗಿದ್ದಾರೆ.

ದಕ್ಷಿಣ ಕನ್ನಡದ ನಿಟ್ಟೆ ಕಾಲೇಜಿನ 8 ರಿಂದ ಹತ್ತು ಜನ ಪ್ರಾಧ್ಯಾಪಕರು ತೀರ್ಥಮತ್ತೂರಿನ ಯೋಗ ನರಸಿಂಹ ಮಠಕ್ಜೆ ಆಗಮಿಸಿದ್ದರು. ಇಂದು ಮುಂಜಾನೆ ತುಂಗಾ ನದಿಗೆ ಸ್ನಾನಕ್ಕೆ ಇಳಿದಿದ್ದಾರೆ.ಈ ಸಂಧರ್ಭದಲ್ಲಿ ಇಬ್ವರು ನೀರು ಪಾಲಾಗಿದ್ದಾರೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು‌ ಮತ್ತೋರ್ವರ ಮೃತದೇಹ ಶೋಧ ಕಾರ್ಯ ಮುಂದುವರೆದಿದೆ.

ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ.ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.