ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ತಮಡಿಕೊಪ್ಪ ಗ್ರಾಮದ ಶ್ರೀ ಗುರು ಕರಿಬಸವೇಶ್ವರ, ಬಾಲಸುಬ್ರಹ್ಮಣ್ಯ ಸ್ವಾಮಿ, ನಾಗದೇವತೆ ಮತ್ತು ನಾಗ ಕ್ಷೇತ್ರ ದೇವಸ್ಥಾನದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ಸಂಪನ್ನಗೊಂಡಿತು.
ತೀರ್ಥಹಳ್ಳಿ ತಾಲ್ಲೂಕು ಮಲ್ಲೇಸರ ಗ್ರಾಮದ ನಾಗರಾಜ ಮತ್ತು ಅನುಸೂಯ ದಂಪತಿಗಳ ಪುತ್ರಿಯಾದ ಕುಮಾರಿ ಅನ್ವಿತಾ ಇವರು ಇತ್ತೀಚೆಗೆ ನೆಡೆದ ದ್ವಿತೀಯ ಪಿ ಯು ಸಿ ಪರೀಕ್ಷೆ ಯಲ್ಲಿ ಕಾಮರ್ಸ್ ವಿಭಾಗ ದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಇವರ ಈ ಅದ್ಭುತಪೂರ್ವ ಸಾಧನೆಯನ್ನು ಮೆಚ್ಚಿ ತಮಡಿಕೊಪ್ಪ ಗ್ರಾಮದ ಗುರು ಕರಿಬಸವೇಶ್ವರ ಸ್ವಾಮಿ ಹಾಗೂ ಬಾಲಸುಬ್ರಮಣ್ಯ ಸ್ವಾಮಿ ಮತ್ತು ನಾಗದೇವತೆ ನಾಗಕ್ಷೇತ್ರ ದೇವಸ್ಥಾನದ ಧರ್ಮದರ್ಶಿಗಳಾದ ಪ್ರಕಾಶ್ ಟಿ ಇವರು ಅನ್ವಿತಾಳ ಶ್ರೇಯೋಭಿವೃದ್ಧಿಗಾಗಿ ಶ್ರೀ ಕ್ಷೇತ್ರದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷ ಬಲಿ ಪೂಜೆ ನೆರವೇರಿಸಿ ಸನ್ಮಾನಿಸಿ ಗೌರವಿಸಿದರು, ಹಾಗೂ ವೈಯಕ್ತಿಕ ಧನ ಸಹಾಯ ನೀಡುವುದರೊಂದಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು
ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣ ಸೇವೆ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು