ಹಾಲಪ್ಪ ಮನೆ ಹಾಳು ಮಾಡೋದ್ರಲ್ಲಿ ನಂಬರ್ ಒನ್, : ಬೇಳೂರು ಗೋಪಾಲ ಕೃಷ್ಣ ಆರೋಪ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ಭರ್ಜರಿ ಚುನಾವಣಾ ಪ್ರಚಾರ.
ರಿಪ್ಪನ್ ಪೇಟೆ :ಹಿಂದೆ ಸೊರಬದಲ್ಲಿ ಬಂಗಾರಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡಿದ್ರು.ಈಗ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಕುಟುಂಬ ಒಡೆದು, ಮನೆ ಹಾಳು ಮಾಡೋಕೆ ರೆಡಿ ಆಗಿದ್ದಾರೆ. ಎಂದು ಮಾಜಿ ಶಾಸಕ ಹಾಗೂ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮುಗಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತನ್ನ ರಾಜಕೀಯ ಜೀವನಕ್ಕಾಗಿ ಮನೆ ಹಾಳು ಮಾಡೋ ಕೆಲಸ ಗೊತ್ತಿರುವುದು ರಾಜ್ಯದಲ್ಲಿ ಹಾಲಪ್ಪನಿಗೆ ಮಾತ್ರ.ಹಾಲಪ್ಪನ ಬಗ್ಗೆ ನಾನು ಟೀಕೆ ಮಾಡೋದೇ ಬೇಡ.ಅವರ ಭ್ರಷ್ಟಾಚಾರ, ಪಕ್ಷ ಒಡೆದಿದ್ದನ್ನ ಅವರ ಪಕ್ಷದವರೇ ಹೇಳ್ತಿದ್ದಾರೆ.
ವಿರೋದ ಪಕ್ಷವಾಗಿ ನಾವು ಕೂಡ ನಮ್ಮ ಕೆಲಸ ಮಾಡಿದ್ದೇವೆ ಎಂದರು.
ನಾಮಪತ್ರ ಸಲ್ಲಿಕೆ ವೇಳೆ ಬಾರಿ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದು ಭರ್ಜರಿ ಓಪನಿಂಗ್ ನನಗೆ ನೀಡಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ,ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತೆ ಆಗಿದೆ. ಮಾಜಿ ಸಿಎಂ, ಬಿಜೆಪಿ ಕಟ್ಟಾಳು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ನಿಜಕ್ಕೂ ಖುಷಿಯ ವಿಚಾರವೆಂದರು..
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಮೂಲೆಗುಂಪು ಮಾಡಿ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗೆ ಇಳಿಸಿದ್ರು.ಪಕ್ಷಕ್ಕಾಗಿ ದುಡಿದ ನಾಯಕರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಇಲ್ಲದಂತೆ ಮಾಡಿದ್ದಾರೆ. ಮೋದಿ ಬಿಟ್ಟರೇ, ಬೇರೆ ಯಾರಿಗೂ ಬೆಲೆ ಇಲ್ಲ ಎಂಬಂತೆ ಆಗಿದೆ. ಲಕ್ಷಣ್ ಸವದಿ ಡಿಸಿಎಂ ಆಗಿದ್ದವರು. ಅವರಿಗೂ ಸಹ ಟಿಕೆಟ್ ನೀಡಲಿಲ್ಲ ಎಂದರು.ಹೋಗಿ ಹೋಗಿ ರಮೇಶ್ ಜಾರಕಿಹೊಳಿ ಅಂತವರಿಗೆ ಟಿಕೆಟ್ ಕೋಡ್ತಾರೆ. ಇದನ್ನ ಗಮನಿಸಿದ್ರೇ, ಪಕ್ಷ ದುರಂತದ ಹಾದಿ ಹಿಡಿದಿರೋದು ಗೊತ್ತಾಗುತ್ತೇ.ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಾಮಾನ್ಯ.ಇಲ್ಲಿಂದನೂ ಹೋಗ್ತಾರೆ. ಅಲ್ಲಿಂದಾನೂ ಬರ್ತಾರೆ.ರಾಜಕೀಯ ತಂತ್ರ ನೆಡೆಯುತ್ತಾ ಇರುತ್ತದೆ,ಇದಕ್ಕೆಲ್ಲ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದರು.
ಈಗಾಗಲೇ ಹೊಸನಗರ- ಸಾಗರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಈ ಬಾರಿ ಗೆಲುವು ನನ್ನದೇ :
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ನನ್ನದೇ. ಬಿಜೆಪಿ ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಈಗಾಗಲೇ ಬಿಜೆಪಿ ಪಕ್ಷದಲ್ಲಿದ್ದ ಹಿರಿಯ ಮುಖಂಡರುಗಳು ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಹರತಾಳು ಹಾಲಪ್ಪ ವಿರುದ್ಧ ಸಿಡಿದೆದ್ದಿದ್ದಾರೆ ಹಾಗಾಗಿ ಈ ಬಾರಿ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ.ಪಿ ರಾಮಚಂದ್ರ, ಶ್ವೇತಾ ಆರ್ ಬಂಡಿ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಾಸಪ್ಪ ಗೌಡ, ಕೆರೆಹಳ್ಳಿ ಚಂದ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಜಿ ನಾಗರಾಜ, ಡಿ,ಈ.ಮಧುಸೂದನ್. ಪ್ರಕಾಶ್ ಪಾಲೇಕರ್. ಆಸಿಫ್. ಉಲ್ಲಾಸ್, ಶ್ರೀನಿವಾಸ್ ಆಚಾರ್, ದೇವರಾಜ್ ಕೆರಹಳ್ಳಿ, ಮಳವಳ್ಳಿ ಮಂಜುನಾಥ್, ವಡಹೊಸಹಳ್ಳಿ ಶಿವು,ಶ್ರೀಧರ್, ಜಿ ಆರ್ ಗೋಪಾಲಕೃಷ್ಣ, ಧನಲಕ್ಷ್ಮಿ, ಸಾಜಿದಾ ಹನೀಪ್, ಲೇಖನ, ಇನ್ನಿತರರಿದ್ದರು.