w
Headlines
Home » ರಿಪ್ಪನ್‌ಪೇಟೆ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಭಾರಿ ನಷ್ಟ|fire

ರಿಪ್ಪನ್‌ಪೇಟೆ : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಭಾರಿ ನಷ್ಟ|fire

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಚಂದಾಳದಿಂಬ ಗ್ರಾಮದಲ್ಲಿ ರೈತರೊಬ್ಬರ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಭಾರಿ ನಷ್ಟವಾಗಿರುವ ಘಟನೆ ನಡೆದಿದೆ.




ಚಂದಾಳದಿಂಬ ಸಮೀಪದ ಅಮಟೆಕೊಪ್ಪ ಗ್ರಾಮದ ಲಿಂಗಮೂರ್ತಿ ಗೌಡ ರವರ ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಶೇಖರಿಸಿಟ್ಟಿದ್ದ ಹಳೆಯ ನಾಟ ಮತ್ತು ಹುಲ್ಲು ಪಿಂಡಿಗಳು ಬೆಂಕಿಗೆ ಅಹುತಿಯಾಗಿದೆ.


ಬೆಂಕಿ ಹತ್ತಿದ ಮಾಹಿತಿ ಸಿಕ್ಕ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂಧಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರಿಂದಾಗಿ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.




 ಕಾರ್ಯಾಚರಣೆಯಲ್ಲಿ ಹೊಸನಗರ ಅಗ್ನಿಶಾಮಕ ದಳದ ಠಾಣಾಧಿಕಾರಿ. ಕೆ ಟಿ ರಾಜಪ್ಪ ಸಿಬ್ಬಂದಿಗಳಾದ ಎಲ್ ಎಫ಼್ ರಾಜೇಶ್ ,ಟಿ ಎಂ  ಪ್ರವೀಣ್ ,ಎಫ಼್ ಡಿ ಶಿವರಾಜ್, ಎಫ಼್ ಎಂ ಮಂಜುನಾಥ್ ,ಚಿಕ್ಕಯ್ಯ ಮಠಪತಿ ಇದ್ದರು.






Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.