ತೀರ್ಥಹಳ್ಳಿ : ಶಾಸಕರು, ಸಚಿವರು ಸರ್ಕಾರದ ಮಟ್ಟದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಹಣ ಮಂಜುರಾತಿ ಮಾಡಿಸಿಕೊಂಡು ಬರುತ್ತಾರೆ. ಆದರೆ, ಆ ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡದಿದ್ದರೇ ಯಾರಿಗಾದರೂ ಸಿಟ್ಟು ಬಂದೆ ಬರುತ್ತದೆ.ತೀರ್ಥಹಳ್ಳಿ ಆರಗ ಜ್ಞಾನೇಂದ್ರರವರು ಸಹ ಇದೇ ಕಾರಣಕ್ಕೆ ಸಿಟ್ಟುಮಾಡಿಕೊಂಡ ಘಟನೆ ನಡೆದಿದೆ.
ತೀರ್ಥಹಳ್ಳಿಯ ಬಾಳೆ ಕೂಡ್ಲು, ಗುಡ್ಡೆಪಾಲ್ ರಸ್ತೆ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು,ಅಲ್ಲದೆ ಇದೇ ವಿಚಾರವನ್ನು ಸಚಿವ ಆರಗ ಜ್ಞಾನೇಂದ್ರರವರ ಗಮನಕ್ಕೆ ತಂದಿದ್ದರು. ಹೀಗಾಗಿ ಗುಣಮಟ್ಟವನ್ನ ಖುದ್ದು ವೀಕ್ಷಿಸುವ ಸಲುವಾಗಿ ಸಚಿವರು ಸ್ಥಳಕ್ಕೆ ದೌಡಾಯಿಸಿದ್ಧಾರೆ.
2222
ಈ ವೇಳೆ ರಸ್ತೆಯ ಸ್ಥಿತಿಯನ್ನು ಗಮನಿಸಿದ ಆರಗ ಜ್ಞಾನೇಂದ್ರರವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಗುಣಮಟ್ಟದ ಕಾಮಗಾರಿಯನ್ನ ಕೈಗೊಳ್ಳದ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವರು, ನಾವು ಕಷ್ಟಪಟ್ಟು ಸರ್ಕಾರದಿಂದ ದುಡ್ಡು ತಂದು ಕಾಮಗಾರಿ ಮಾಡಿಸ್ತೀವಿ, ಕಷ್ಟಪಟ್ಟು ಕೆಲಸ ಮಾಡಿ ಜನರ ಕೈಲಿ ನಾವು ಬೈಸ್ಕೋಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ಅಲ್ಲದೆ, ಮಾನ ಮರ್ಯಾದೆ ಇರಬೇಕು ಎಂದ ಸಚಿವರು, ನಾನು ನಿಷ್ಟೂರ ಮಾಡಿಸಿಕೊಳ್ಳಬೇಕಾ? ನಾನು ರೋಡಿನಲ್ಲಿ ನಿಂತು ನಾನು ಕೆಲಸ ಮಾಡಿಸೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಅಲ್ಲದೆ ಅವರ ಪರ್ಸಂಟೇಜ್ ಅವರು ತಿಂದು ಇವರ ಪರ್ಸೆಂಟೇಜ್ ಇವರು ತಗೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಸದ್ಯ ಆರಗ ಜ್ಞಾನೇಂದ್ರರವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.