ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪೊಲೀಸ್ v/s ಕಾಂಗ್ರೆಸ್ ಎಂಬ ಪರಿಸ್ಥಿತಿ ಬಂದಿದೆ. ಗೃಹಸಚಿವರ ಕ್ಷೇತ್ರದಲ್ಲಿ ಪೊಲೀಸರು ರಾಜಕಾರಣ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ಜಿಲ್ಲಾ ರಕ್ಷಣಾಧಿಕಾರಿಗಳು ಬರುವವರೆಗೂ ತೀರ್ಥಹಳ್ಳಿ ಪೊಲೀಸ್ ಠಾಣೆ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸುತಿದ್ದಾರೆ.
ಮಂಗಳವಾರ ನಡೆದ ಹರೀಶ್ ಮೇಲಿನ ಹಲ್ಲೆ ಕೇಸ್ನಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದ ಕಿಮ್ಮನೆ ರತ್ನಾಕರ್ ನೇರವಾಗಿ ಬಂದು ಪೊಲೀಸ್ ಠಾಣೆ ಎದುರು ಧರಣಿ ಕೂತರು, ಅಲ್ಲಿಯೇ ಜಮಖಾನ ತರಿಸಿ ಮಲಗಿ ಪ್ರತಿಭಟನೆ ಆರಂಭಿಸಿದರು.
ನಾನು ರಾಜಕೀಯವನ್ನು ಪವರ್, ದುಡಿಮೆ, ದುಡ್ಡಿಗಾಗಿ ಆಯ್ಕೆ ಮಾಡಿಕೊಂಡಿಲ್ಲ. ಎಫ್ಐಆರ್ ನಲ್ಲಿ ದಾಖಲಾದ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸ್ಪಾಟ್ ನಲ್ಲಿ ಇದ್ದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ದೆ ಮಾಡಲ್ಲ. ದುರುದ್ದೇಶ ಪೂರಕವಾಗಿ ಪ್ರಕರಣದಲ್ಲಿ ಭಾಗಿಯಾಗದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ಸಿಸಿಟಿವಿ ಪ್ಯೂಟೇಜ್ ಚೆಕ್ ಮಾಡಿ ಹೇಳಿ. ತನಿಖೆ ಮಾಡದೆ ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸುವ ಉದ್ದೇಶ ಏನಿತ್ತು.
ಇನ್ನೂ ಡಿವೈಎಸ್ಪಿಯವರು ಕಿಮ್ಮನೆಯವರ ಬಳಿ ಮಾತನಾಡಿ ಪ್ರಕರಣ ಇತ್ಯರ್ಥ ಮಾಡುತ್ತೇನೆ. ಆರೋಪಿಗಳು ಅಲ್ಲದವರಿಗೆ ಬಿ ಫಾರ್ಮ್ ನೀಡುತ್ತೇನೆ ಎಂದರೂ ಇದನ್ನ ಅಲ್ಲಗಳೆದ ಕಿಮ್ಮನೆ ರತ್ನಾಕರ್ ನೀವು ಮಾಡಿದೆಲ್ಲ ಸಾಕು. ಪರವಾಗಿಲ್ಲ ನೀವು ರೆಸ್ಟ್ ತೆಗೆದುಕೊಳ್ಳಿ ನಾನು ಬಿ ರಿಪೋರ್ಟ್ ನೀಡುವವರೆಗೆ ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ, ರಾಘವೇಂದ್ರ ಪುಟ್ಟೊಡ್ಲು, ಯುವ ಕಾಂಗ್ರೆಸ್ನ ರಾಷ್ಟ್ರೀಯ ವಕ್ತರರಾದ ಆದರ್ಶ ಹುಂಚದಕಟ್ಟೆ, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಗೀತಾ ರಮೇಶ್, ಶಬನ, ಕಾಂಗ್ರೆಸ್ ಯುವ ಪ್ರಮುಖರಾದ ಜಯಕರ ಶೆಟ್ಟಿ, ಶೇಡ್ಗರ್ ಗ್ರಾಮ ಪಂಚಾಯಿತಿ ಸದಸ್ಯ ಪಣಿರಾಜ್, ಸಿಂಗನಬಿದ್ರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್,ವಿಠಲ್ ನಗರ ಸುಬ್ರಹ್ಮಣ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ನಮ್ರತ್, ಜಯಪ್ರಕಾಶ್ ಶೆಟ್ಟಿ, ಜಾವೀದ್, ಸೇರಿದಂತೆ ಅನೇಕರು ಉಪಸ್ಥಿತರಿದ್ದಾರೆ.