ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ನೀಡಿ ಯುವ ಸಮಾಜಕ್ಕೆ ಪ್ರೇರಣೆಯಾದ ಕಾಲೇಜಿನ ಯುವತಿ :
ರಿಪ್ಪನ್‌ಪೇಟೆ : ದಾನ ಮಾಡುವವರಿಗೆ ಇಂತಹದೇ ಎಂಬ ನಿಯಮವೇನು ಇಲ್ಲ ಯಾವುದಾದರೇನು ಕೊಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಇಲ್ಲಿನ ಶಬರೀಶ್ ನಗರದ ನಿವಾಸಿ ಕುಮಾರಿ ಚಂದನ ಜಿ.ನಾಯಕ್ ಮಾದರಿಯಾಗಿದ್ದಾಳೆ. ಕಣ್ಣು-ರಕ್ತ – ವಸ್ತ-ಅನ್ನದಾನ-ವಿದ್ಯಾದಾನ ಗೋ ದಾನ, ಧನ ದಾನ ಹೀಗೆ ಹತ್ತು ಹಲವು ವಿಧದಲ್ಲಿ ದಾನ ಮಾಡುವುದನ್ನು ನಾವು ಕೇಳಿರುತ್ತೇವೆ ಅದರೆ ಇಲ್ಲಿನ ಯುವತಿಯೊಬ್ಬಳು ತನ್ನ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗೆ ಮಾರಕ ರೋಗದ…